ಪ್ರತೀ ಮ್ಯಾಚ್‌ನಲ್ಲಿಯೂ ಪ್ರದರ್ಶನ ಉತ್ತಮವಾಗಿದ್ದರೂ, ಕೆಟ್ಟದಾಗಿದ್ದರೂ ಅನುಷ್ಕಾಳ ಮೇಲೆ ಗೂಬೆ ಕೂರಿಸುವವರ ವಿರುದ್ಧ ಕೊಹ್ಲಿ ಗುಡುಗಿದ್ದೇ ತಡ, ಇವರಿಬ್ಬರೂ ಒಂದಾಗಲಿದ್ದಾರೆ ಎಂಬ ಸುದ್ದಿ ಕೇಳಿ ಬಂದಿತ್ತು. ಈಗ ಆ ಸುದ್ದಿ ನಿಜವಾಗಿದೆ. ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ತಮ್ಮೆಲ್ಲಾ ಮುನಿಸುಗಳನ್ನು ಬದಿಗೆ ತಳ್ಳಿ ಮತ್ತೆ ಒಂದಾಗಿದ್ದಾರೆ.