ಎಬಿಡಿ ಅಬ್ಬರ: ಆರ್ಸಿಬಿಗೆ 1 ರನ್‌ಗಳ ವಿರೋಚಿತ ಜಯ

ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಬಿಡಿ ವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ ಮತ್ತು ಶೇನ್ ವಾಟ್ಸನ್ ಬೌಲಿಂಗ್ ದಾಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ
ಎಡಿಬಿ ವಿಲಿಯರ್ಸ್
ಎಡಿಬಿ ವಿಲಿಯರ್ಸ್
Updated on: 

ಮೊಹಾಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಎಬಿಡಿ ವಿಲಿಯರ್ಸ್ ಅಬ್ಬರದ ಬ್ಯಾಟಿಂಗ್ ಮತ್ತು ಶೇನ್ ವಾಟ್ಸನ್ ಬೌಲಿಂಗ್ ದಾಳಿಗೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ತತ್ತರಿಸಿದ್ದು, 1 ರನ್ ನಿಂದ ಆರ್ಸಿಬಿಗೆ ಶರಣಾಗಿದೆ.

ಮೊಹಾಲಿಯ ಪಂಬಾಜ್ ಕ್ರಿಕೆಟ್ ಅಸೋಶಿಯೇಷನ್ ಐಎಸ್ ಬಿಂದ್ರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಕಿಂಗ್ಸ್ ಇಲೆವೆನ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಇದರೊಂದಿಗೆ ಮೊದಲು ಬ್ಯಾಟಿಂಗ್ ಮಾಡಿ ಆರ್ಸಿಬಿ ನಿಗದಿತ ಓವರ್ ನಲ್ಲಿ 6 ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಕಿಂಗ್ಸ್ ಇಲೆವೆನ್ ಅತ್ಯುತ್ತಮ ಪ್ರದರ್ಶನ ನೀಡಿದರು ನಿಗದಿತ ಓವರ್ ನಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 174 ರನ್ ಗಳಿಸಲಷ್ಟೇ ಶಕ್ತವಾಯಿತು. ಇದರೊಂದಿಗೆ ಆರ್ಸಿಬಿ 1 ರನ್ ಗಳ ರೋಚಕ ಜಯ ದಾಖಲಿಸಿತು.

ಕಿಂಗ್ಸ್ ಪರ ಆಶೀಮ್ ಆಮ್ಲಾ 21, ಮುರಳಿ ವಿಜಯ್ 89, ಸಾಹಾ 16, ಡೇವಿಡ್ ಮಿಲ್ಲರ್ 0, ಸ್ಟೈನಿಸ್ ಅಜೇಯ 34, ಬೆಹರ್ಡಿನ್ 9 ರನ್ ಗಳಿಸಿದ್ದಾರೆ.

ಆರ್ಸಿಬಿ ಪರ ಶೇನ್ ವಾಟ್ಸನ್ 2, ಚಾಹಾಲ್ 1 ವಿಕೆಟ್ ಪಡೆದಿದ್ದಾರೆ.

ಆರ್ಸಿಬಿ ಪರ ವಿರಾಟ್ ಕೊಹ್ಲಿ 20, ಕೆಎಲ್ ರಾಹುಲ್ 42, ಎಬಿಡಿ ವಿಲಿಯರ್ಸ್ 64, ಶೇನ್ ವಾಟ್ಸನ್ 1, ಸಚಿನ್ ಬೇಬಿ 33, ಹೆಡ್ 11 ರನ್ ಗಳಿಸಿದ್ದಾರೆ.

ಕಿಂಗ್ಸ್ ಪರ ಸಂದೀಪ್ ಶರ್ಮಾ, ಕರಿಯಪ್ಪ ತಲಾ 2 ವಿಕೆಟ್ ಪಡೆದಿರೆ, ಅಕ್ಷರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com