ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೇಲ್ - ಕೊಹ್ಲಿ ಯಿಂದ ರನ್ ಮಳೆ : ಪಂಜಾಬ್ ವಿರುದ್ಧ ಆರ್ ಸಿಬಿ ಗೆ ಗೆಲುವು

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ.18 ರಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಸುರಿಸಿದ ರನ್ ಮಳೆಯ ಪರಿಣಾಮ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೇಲ್ - ಕೊಹ್ಲಿ ಯಿಂದ ರನ್ ಮಳೆ ಪಂಜಾಪ್ ವಿರುದ್ಧ ಆರ್ ಸಿಬಿ ಗೆ ಗೆಲುವು
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗೇಲ್ - ಕೊಹ್ಲಿ ಯಿಂದ ರನ್ ಮಳೆ ಪಂಜಾಪ್ ವಿರುದ್ಧ ಆರ್ ಸಿಬಿ ಗೆ ಗೆಲುವು

ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ.18 ರಂದು ನಡೆದ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಆರ್ ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಕ್ರಿಸ್ ಗೇಲ್ ಸುರಿಸಿದ ರನ್ ಮಳೆಯ ಪರಿಣಾಮ ಆರ್ ಸಿಬಿ ಪಂಜಾಬ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

ಸಂಜೆಯಿಂದ ಪ್ರಾರಂಭವಾದ ಮಳೆ ನಿಂತ ನಂತರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ- ಕ್ರಿಸ್ ಗೇಲ್ ರನ್ ಮಳೆ ಸುರಿದು, ಆರ್ ಸಿಬಿ ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಗಳ  ಆರ್ಭಟಕ್ಕೆ ಪಂಜಾಬ್ ತಂಡದ ಬೌಲರ್ ಗಳು ಅಕ್ಷರಶಃ ತತ್ತರಿಸಿದರು. ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆರ್‌ ಸಿಬಿ ಕ್ರಿಸ್ ಗೇಲ್ ಹಾಗೂ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ನೆರವಿನಿಂದ ಆರ್ ಸಿಬಿ ತಂಡ ನಿಗದಿತ 15 ಓವರ್‌ ಗಳಿಗೆ 211 ರನ್‌ ಗಳ ಬೃಹತ್ ಮೊತ್ತ ಪೇರಿಸಿತು.  ಗುರಿ ಬೆನ್ನಟ್ಟಿದ ಪಂಜಾಬ್ 14 ಓವರ್‌ಗಳಿಗೆ 9 ವಿಕೆಟ್ ನಷ್ಟಕ್ಕೆ 120 ರನ್ ಗಳಿಸುವಷ್ಟರಲ್ಲಿ ಮತ್ತೆ ಮಳೆ ಬಂದ ಹಿನ್ನೆಲೆಯಲ್ಲಿ ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಬೆಂಗಳೂರು ತಂಡಕ್ಕೆ 82ರನ್ ಗಳ ಗೆಲವು ಘೋಷಿಸಲಾಯಿತು.

ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಪಂಜಾಬ್ ಆರಂಭದಲ್ಲಿ ಉತ್ತಮ ಆಟ ಪ್ರದರ್ಶಿಸಿತಾದರೂ ಆರ್‌ಸಿಬಿ ಬೌಲಿಂಗ್ ಎದುರು ಕುಸಿಯಿತು. ಮೊದಲ ಓವರ್‌ ನ ಮೊದಲೆರಡು ಎಸೆತವನ್ನು ಬೌಂಡರಿಗೆ ಅಟ್ಟಿದ ನಾಯಕ ಮುರಳಿ ವಿಜಯ್(16) ಆರ್ ಸಿಬಿ ಗೆ ಸವಾಲಾಗಿ ಪರಿಣಮಿಸಿದರಾದರೂ, ಅವರನ್ನು ಪೆವಿಲಿಯನ್ ಗೆ ಕಳಿಸುವಲ್ಲಿ ಆರ್ ಸಿಬಿ ತಂಡದ ಬೌಲರ್ ಅರವಿಂದ್ ಯಶಸ್ವಿಯಾದರು. ಬಿರುಸಿನ ಆಟಕ್ಕೆ ಮೊರೆ ಹೋಗಿದ್ದ ವೃದ್ಧಿಮಾನ್ ಸಾಹಾ(24) ಅವರ ಆಟವೂ ಹೆಚ್ಚು ಹೊತ್ತು ನಡೆಯಲಿಲ್ಲ. ಮತ್ತೊಬ್ಬ ಆರಂಭಿಕ ಹಶೀಮ್ ಆಮ್ಲ(9) ಸಹ ಅರವಿಂದ್‌ಗೆ ವಿಕೆಟ್ ಒಪ್ಪಿಸಿದರು. ಆ ನಂತರ ನಡೆದಿದ್ದು ಪಂಜಾಬ್ ಬ್ಯಾಟ್ಸ್ ಮ್ಯಾನ್ ಗಳ ಪೆವಿಲಿಯನ್ ಪರೇಡ್. ಕೇವಲ 54 ರನ್‌ ಗಳಿಗೆ ಪ್ರಮುಖ 4  ವಿಕೆಟ್ ಕಳೆದುಕೊಂಡಿದ್ದ ಪಂಜಾಬ್ ಗೆ ಗೆಲುವಿನ ನಿರೀಕ್ಷೆ ಕ್ಷೀಣಿಸಿತ್ತು. ಆದರೆ ಐದನೇ ವಿಕೆಟ್‌ಗೆ ಜತೆಯಾದ ಅಕ್ಷರ್ ಪಟೇಲ್(13) ಹಾಗೂ ಗುರ್‌ಕೀರತ್ ಸಿಂಗ್ (18) ಅಲ್ಪ ಪ್ರಮಾಣದ ಹೋರಾಟ ನಡೆಸಿದರದರೂ ಪಟೇಲ್ ವಿಕೆಟ್ ಪತನವಾಗುತ್ತಿದ್ದಂತೆ ಪಂಜಾಬ್ ಆಟ ಮುಗಿಸಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com