ಕೊಹ್ಲಿಯನ್ನು ಡಕ್ ಔಟ್ ಮಾಡಲು ಬರೊಬ್ಬರಿ 2 ವರ್ಷಗಳು ಬೇಕಾಯ್ತೇ?

ಕ್ರಿಕೆಟ್ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್ ನಲ್ಲಿರುವ ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿಯನ್ನು ಡಕ್ ಔಟ್ (ಶೂನ್ಯ) ಮಾಡಲು ಬರೊಬ್ಬರಿ 2 ವರ್ಷಗಳೇ ಬೇಕಾಯಿತು..
ಧವಳ್ ಕುಲಕರ್ಣಿ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಔಟ್ ಆದ ಪರಿ (ಕ್ರಿಕ್ ಇನ್ಫೋ ಚಿತ್ರ)
ಧವಳ್ ಕುಲಕರ್ಣಿ ಬೌಲಿಂಗ್ ನಲ್ಲಿ ವಿರಾಟ್ ಕೊಹ್ಲಿ ಔಟ್ ಆದ ಪರಿ (ಕ್ರಿಕ್ ಇನ್ಫೋ ಚಿತ್ರ)
Updated on

ಬೆಂಗಳೂರು: ಕ್ರಿಕೆಟ್ ವೃತ್ತಿ ಜೀವನದ ಅತ್ಯುತ್ತಮ ಫಾರ್ಮ್ ನಲ್ಲಿರುವ ಭಾರತದ ಸ್ಫೋಟಕ ಬ್ಯಾಟ್ಸಮನ್ ವಿರಾಟ್ ಕೊಹ್ಲಿಯನ್ನು ಡಕ್ ಔಟ್ (ಶೂನ್ಯ) ಮಾಡಲು ಬರೊಬ್ಬರಿ 2 ವರ್ಷಗಳೇ ಬೇಕಾಯಿತು.

ವಿರಾಟ್ ಕೊಹ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಮತ್ತು ತಂಡದ ಸ್ಫೋಟಕ ಬ್ಯಾಟ್ಸಮನ್. ಏಷ್ಯಾಕಪ್ ಟಿ20 ಸರಣಿಯಿಂದ ಆರಂಭವಾದ ಕೊಹ್ಲಿ ಬ್ಯಾಟಿಂಗ್ ಅಬ್ಬರ ಬಳಿಕ ಟಿ20 ವಿಶ್ವಕಪ್, ಇದೀಗ ಐಪಿಎಲ್ ಟೂರ್ನಿಯಲ್ಲೂ ಮುಂದುವರೆದಿದ್ದು, ಪ್ರಸ್ತುತ ವಿಶ್ವದ ಯಾವುದೇ ಒಬ್ಬ ಅಂತಾರಾಷ್ಟ್ರೀಯ ಕ್ರಿಕೆಟಿಗ ಹೊಂದಿರದಷ್ಟು ಅಮೋಘ ಬ್ಯಾಟಿಂಗ್ ಸರಾಸರಿ ಕೊಹ್ಲಿ ಹೊಂದಿದ್ದಾರೆ. ಈಗಾಗಲೇ ಐಪಿಎಲ್ ಸತತ ಶತಕಗಳ ಸರಣಿ ಮೂಲಕ ದಾಖಲೆ ಬರೆದಿರುವ ಕೊಹ್ಲಿ, ಪ್ರಸಕ್ತ ಟೂರ್ನಿಯ ಅತ್ಯಧಿಕ ರನ್ ಗಳಿಸಿರುವ ಅಗ್ರಮಾನ್ಯ ಆಟಗಾರ.

ಪ್ರಸಕ್ತು ಟೂರ್ನಿಯಲ್ಲಿ ಒಟ್ಟು 15 ಪಂದ್ಯಗಳನ್ನು ಆಡಿರುವ ಕೊಹ್ಲಿ ಬರೊಬ್ಬರಿ 83.54 ಸರಾಸರಿಯಲ್ಲಿ 919 ರನ್ ಗಳಿಸಿದ್ದಾರೆ. ಈ ಪೈಕಿ 4 ಶತಕ ಮತ್ತು 6 ಅರ್ಧಶತಕಗಳು ಕೂಡ ಸೇರಿವೆ. ಪ್ರಸಕ್ತ ಐಪಿಎಲ್ ಸರಣಿಯಲ್ಲಿ ಒಟ್ಟು 36 ಸಿಕ್ಸರ್ ಗಳನ್ನು ಸಿಡಿಸಿರುವ ಕೊಹ್ಲಿ ಬರೊಬ್ಬರಿ 78 ಬೌಂಡರಿಗಳನ್ನು ಭಾರಿಸಿದ್ದಾರೆ. ಅಂತೆಯೇ ನಾಲ್ಕು ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದ್ದಾರೆ. ಹೀಗೆ ಪ್ರಸ್ತುತ ಕ್ರಿಕೆಟ್ ವೃತ್ತಿ ಜೀವನದಲ್ಲಿ ಉತ್ತುಂಗ ಸ್ಥಿತಿಯಲ್ಲಿರುವ ವಿರಾಟ್ ಕೊಹ್ಲಿ ಕಳೆದ 2 ವರ್ಷಗಳಿಂದ ಟಿ20 ಮಾದರಿ ಕ್ರಿಕೆಟ್ ನಲ್ಲಿ ಡಕ್ ಔಟ್ ಆಗಿರಲೇ ಇಲ್ಲ. ಕೊನೆಯ ಬಾರಿಗೆ ವಿರಾಟ್ ಕೊಹ್ಲಿ 2014ರಲ್ಲಿ ನಡೆದ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಡಕ್ ಔಟ್ ಆಗಿದ್ದರು. ಈ ಎರಡು ವರ್ಷಗಳ ಅವಧಿಯಲ್ಲಿ ಕೊಹ್ಲಿ ಬರೊಬ್ಬರಿ 51 ಇನ್ನಿಂಗ್ಸ್ ಗಳನ್ನು ಆಡಿದ್ದಾರೆ. ಈ 51 ಇನ್ನಿಂಗ್ಸ್ ನಲ್ಲಿಯೂ ಒಮ್ಮೆಯೂ ಡಕ್ ಔಟ್ ಆಗಿರಲಿಲ್ಲ.

ಆದರೆ ನಿನ್ನೆ ನಡೆದ ಗುಜರಾತ್ ಲಯನ್ಸ್ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ 51 ಇನ್ನಿಂಗ್ಸ್ ಗಳ ಬಳಿಕ ಮೊದಲ ಬಾರಿಗೆ ಡಕ್ ಔಟ್ ಆದರು. ಗುಜರಾತ್ ತಂಡದ ಧವಳ್ ಕುಲಕರ್ಣಿ ಮಾರಕ ಎಸೆತವನ್ನು ತಪ್ಪಾಗಿ ಅರ್ಥೈಸಿಕೊಂಡ ಕೊಹ್ಲಿ ಅದನ್ನು ಸಮರ್ಥವಾಗಿ ಆಡುವಲ್ಲಿ ವಿಫಲವಾಗಿ ಔಟ್ ಆದರು. ಕ್ರಿಕೆಟ್ ರಂಗದಲ್ಲಿ ಇದೊಂದು ದಾಖಲೆಯಾಗಿ ಪರಿಣಮಿಸಿದ್ದು, ಆಟಗಾರನೊಬ್ಬ ಇಷ್ಟು ದೀರ್ಘ ಅವಧಿಯಲ್ಲಿ ಡಕ್ ಔಟ್ ಆಗದೇ ಇನ್ನಿಂಗ್ಸ್ ಆಡಿರುವುದು ದಾಖಲೆಯಾಗಿ ಮಾರ್ಪಟ್ಟಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com