ನವದೆಹಲಿ: ಕಳೆದ ಭಾನುವಾರ ಟೀಂ ಇಂಡಿಯಾದ ಆಟಗಾರ ಯುವರಾಜ್ ಸಿಂಗ್ ಅವರು ತಮ್ಮ ಜವಳಿ ಬ್ರ್ಯಾಂಡ್ ಲೋಕಾರ್ಪಣೆ ಮಾಡಿದ್ದರು. ಈ ಸಮಾರಂಭಕ್ಕೆ ನಾಯಕ ಎಂಎಸ್ ಧೋನಿ ಅವರ ಅನುಪಸ್ಥಿತಿ ಎದ್ದು ಕಾಣುತ್ತಿದ್ದು ಈ ಸಂಬಂಧ ಕೇಳಿದ ಪ್ರಶ್ನೆಗೆ ಯುವರಾಜ್ ಸಿಂಗ್ ಧೋನಿಗೆ ನನ್ನ ಕಾಲ್ ರಿಸೀವ್ ಮಾಡಲು ಸಮಯವಿಲ್ಲ ಎಂದು ಹೇಳಿದ್ದಾರೆ.
YWC ಫ್ಯಾಷನ್ ಬ್ರಾಂಡ್ ಲೋಕಾರ್ಪಣೆಗೆ ವೆಸ್ಟ್ ಇಂಡೀಸ್ ನಿಂದ ಕ್ರಿಸ್ ಗೇಯ್ಲ್ ಹಾಗೂ ಡಿಜೆ ಬ್ರಾವೋ ಸೇರಿದಂತೆ ಚಿತ್ರರಂಗ, ಕ್ರಿಕೆಟ್ ರಂಗದ ಗಣ್ಯಾತಿಗಣ್ಯರು ಆಗಮಿಸಿದ್ದರು. ಆದರೆ ಧೋನಿ ಮಾತ್ರ ಸಮಾರಂಭಕ್ಕೆ ಆಗಮಿಸಿರಲಿಲ್ಲ.
ಎಂಎಸ್ ಧೋನಿ ತುಂಬಾ ಬ್ಯುಸಿ ಆಗಿದ್ದಾರೆ ಎನಿಸುತ್ತದೆ. ನಾನು ಫೋನ್ ಕಾಲ್ ಮಾಡಿದರೂ ರಿಸೀವ್ ಮಾಡಲಿಲ್ಲ. ಅವರು ಎಲ್ಲಿದ್ದಾರೆ ಎಂದು ಹುಡುಕಿ ಸಾಕಾಯಿತು ಎಂದು ಯುವರಾಜ್ ಸಿಂಗ್ ಹೇಳಿಕೊಂಡಿದ್ದಾರೆ.
ಧೋನಿ ಈ ರೀತಿ ಫೋನ್ ಕಾಲ್ ರಿಸೀವ್ ಮಾಡದೆ ಇರುವುದು ಹೊಸ ಸಂಗತಿಯಲ್ಲಿ. ಈ ಹಿಂದೆ ವಿವಿಎಸ್ ಲಕ್ಷ್ಮಣ್ ಕೂಡಾ ಧೋನಿ ವಿರುದ್ಧ ಇದೇ ಆರೋಪ ಮಾಡಿದ್ದರು.