ಪಂದ್ಯದ ವೇಳೆ ಚೆಂಡು ಬಡಿದು ಕುಸಿದು ಬಿದ್ದ ಪ್ರಗ್ಯಾನ್ ಓಜಾ

ಇಂಡಿಯಾ ಗ್ರೀನ್ ಪರ ಆಡುತ್ತಿರುವ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಕ್ಷೇತ್ರರಕ್ಷಣೆ ಮಾಡುವಾಗ ತಲೆಯ ಹಿಂಭಾಗಕ್ಕೆ ಚೆಂಡು ತಾಗಿ ಕುಸಿದು ಬಿದ್ದರು...
ಪ್ರಗ್ಯಾನ್ ಓಜಾ
ಪ್ರಗ್ಯಾನ್ ಓಜಾ

ಇಂಡಿಯಾ ಗ್ರೀನ್ ಪರ ಆಡುತ್ತಿರುವ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ಕ್ಷೇತ್ರರಕ್ಷಣೆ ಮಾಡುವಾಗ ತಲೆಯ ಹಿಂಭಾಗಕ್ಕೆ ಚೆಂಡು ತಾಗಿ ಕುಸಿದು ಬಿದ್ದರು.

ಇಂಡಿಯಾ ಬ್ಲ್ಯೂ ತಂಡದ ಆಟಗಾರ ಪಂಕಜ್ ಸಿಂಗ್ ಅವರು ಇಂಡಿಯಾ ಗ್ರೀನ್ ನ ಆಟಗಾರ ಶ್ರೇಯಸ್ ಗೋಪಾಲ್ ಎಸೆದ 63ನೇ ಓವರ್ ನಲ್ಲಿ ಚೆಂಡನ್ನು ಮಿಡ್ ಆನ್ ಗೆ ಹೊಡೆದರು. ಈ ಚೆಂಡನ್ನು ಹಿಡಿಯಲು ಮುಂದಾದ ಓಜಾ ಅವರ ತಲೆಯ ಹಿಂಭಾಗಕ್ಕೆ ಬಡಿಯಿತು. ಚೆಂಡು ಬಡಿತದ ಬಭಸಕ್ಕೆ ಓಜಾ ಮೈದಾನದಲ್ಲೇ ಕುಸಿದು ಬಿದ್ದರು. ಕೂಡಲೇ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಎತ್ತಿಕೊಂಡು ಬಂದು ಆಸ್ಪತ್ರೆಗೆ ದಾಖಲಿಸಲಾಯಿತು.

ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಓಜಾ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಕೆಲ ಮೂಲಗಳು ತಿಳಿಸವೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com