ವೇಗವಾಗಿ 200 ವಿಕೆಟ್ ಪಡೆಯುವ ಮೂಲಕ ಪಾಕ್‌ನ ಯೂನಿಸ್ ಹಿಂದಿಕ್ಕಲಿರುವ ಅಶ್ವಿನ್

ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಸ್ಪೀನ್ನರ್ ಆರ್. ಅಶ್ವಿನ್ ಸ್ಥಾನಪಡೆಯುವ...
ರವಿಚಂದ್ರನ್ ಅಶ್ವಿನ್
ರವಿಚಂದ್ರನ್ ಅಶ್ವಿನ್
Updated on

ನವದೆಹಲಿ: ಶೀಘ್ರದಲ್ಲೇ ಟೆಸ್ಟ್ ಕ್ರಿಕೆಟ್ ನಲ್ಲಿ ಅತೀ ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಸ್ಪೀನ್ನರ್ ಆರ್. ಅಶ್ವಿನ್ ಸ್ಥಾನಪಡೆಯುವ ಮೂಲಕ ಪಾಕಿಸ್ತಾನದ ವಕಾರ್ ಯೂನಿಸ್ ದಾಖಲೆಯನ್ನು ಸರಿಗಟ್ಟಲಿದ್ದಾರೆ.

ಸೆಪ್ಟೆಂಬರ್ 22ರಿಂದ ಶುರವಾಗಲಿರುವ ಭಾರತ-ನ್ಯೂಜಿಲೆಂಡ್ ಟೆಸ್ಟ್ ಸರಣಿಯಲ್ಲಿ ಆಡಳಿರುವ ಅಶ್ವಿನ್ ಈ ಸಾಧನೆ ಮಾಡಬಹುದಾಗಿದೆ. ಸದ್ಯಕ್ಕೆ ಅವರೀಗ 36 ಟೆಸ್ಟ್ ಪಂದ್ಯಗಳಲ್ಲಿ 193 ವಿಕೆಟ್ ಗಳಿಸಿದ್ದು, ವೇಗವಾಗಿ 200 ವಿಕೆಟ್ ಪಡೆದ ಬೌಲರ್ ಗಳ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.

ಆಸ್ಟ್ರೇಲಿಯಾದ ಲೆಗ್ ಸ್ಪಿನ್ನರ್ ಕ್ಲಾರಿ ಗ್ರಿಮಿಟ್(36 ಪಂದ್ಯ, 200 ವಿಕೆಟ್) ಮೊದಲ ಸ್ಥಾನದಲ್ಲಿದ್ದರೆ, ಆಸೀಸ್ ಡಲ್ಲಾಸ್ ಲಿಲೀ, ಪಾಕಿಸ್ತಾನದ ವಕಾರ್ ಯೂನಿಸ್(38 ಪಂದ್ಯಗಳಿಂದ 200 ವಿಕೆಟ್) ಜಂಟಿ ದ್ವಿತೀಯ ಸ್ಧಾನದಲ್ಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com