ಮಿಸ್ಬಾ ಬಳಿಕ ಟೆಸ್ಟ್ ಕ್ರಿಕೆಟ್‌ಗೆ ಯೂನಿಸ್ ಖಾನ್ ಗುಡ್‌ಬೈ

ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಯೂನಿಸ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ...
ಯೂನಿಸ್ ಖಾನ್
ಯೂನಿಸ್ ಖಾನ್
Updated on
ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಯೂನಿಸ್ ಖಾನ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದಾರೆ. 
ಪಾಕ್ ಟೆಸ್ಟ್ ಪಂದ್ಯದ ನಾಯಕ ಮಿಸ್ಬಾ ಉಲ್ ಹಕ್ ಮುಂದಿನ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದು ಅಂತ ಯೂನಿಸ್ ಖಾನ್ ಸಹ ವೆಸ್ಟ್ ಇಂಡೀಸ್ ಟೆಸ್ಟ್ ಸರಣಿ ನನ್ನ ಕೊನೆಯ ಅಂತಾರಾಷ್ಟ್ರೀಯ ಟೆಸ್ಟ್ ಸರಣಿ ಎಂದು ಹೇಳಿದ್ದಾರೆ. 
ಯೂನಿಸ್ ಖಾನ್ ಪಾಕ್ ಪರ 115 ಟೆಸ್ಟ್ ಪಂದ್ಯಗಳನ್ನು ಆಡಿದ್ದು 53.06ರ ಸರಾಸರಿಯಲ್ಲಿ 9,977 ರನ್ ಸಿಡಿಸಿದ್ದಾರೆ. 2009ರ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ 313 ರನ್ ವೈಯಕ್ತಿಕ ಗರಿಷ್ಠ ಮೊತ್ತ ಸಿಡಿಸಿದ್ದರು. 
2000ರಲ್ಲಿ ಶ್ರೀಲಂಕಾ ವಿರುದ್ಧ ಟೆಸ್ಟ್ ಕ್ರಿಕೆಟ್ ಬದುಕಿಗೆ ಪಾದಾರ್ಪಣೆ ಮಾಡಿದರು. 10 ಸಾವಿರ ರನ್ ಪೂರೈಸಲು ಯೂನಿಸ್ ಖಾನ್ ಗೆ 23 ರನ್ ಗಳ ಅವಶ್ಯಕತೆಯಿದ್ದು ವೆಸ್ಟ್ ಇಂಡೀಸ್ ಸರಣಿ ಮೂಲಕ ಇತಿಹಾಸ ನಿರ್ಮಿಸಲಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com