ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ ಆಫ್ರಿದಿಗೆ ವಿಶೇಷ ಉಡುಗೊರೆ ನೀಡಿದ ಕೊಹ್ಲಿ

ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ ಮನ್ ಶಾಹೀದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು ಅವರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಿ...
ಶಾಹೀದ್ ಆಫ್ರಿದಿ-ವಿರಾಟ್ ಕೊಹ್ಲಿ
ಶಾಹೀದ್ ಆಫ್ರಿದಿ-ವಿರಾಟ್ ಕೊಹ್ಲಿ
ನವದೆಹಲಿ: ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸ್ ಮನ್ ಶಾಹೀದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದು ಅವರಿಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸಹಿ ಮಾಡಿರುವ ತಮ್ಮ ಜರ್ಸಿ ನೀಡಿ ಕ್ರೀಡಾ ಸ್ಫೂರ್ತಿ ಮೆರಿದಿದ್ದಾರೆ. 
ಶಾಹಿದ್ ಭಾಯ್ ನಿಮಗೆ ಶುಭಾಶಯಗಳು. ಪಾಕಿಸ್ತಾನದ ಕ್ರಿಕೆಟ್ ತಂಡದಲ್ಲಿ ನೀವು ಆಡುತ್ತಿದ್ದಾಗ ನಿಮ್ಮ ವಿರುದ್ಧ ಆಡಿದ ಪ್ರತಿ ಪಂದ್ಯವೂ ನೆನಪಿನಲ್ಲಿ ಉಳಿಯುವಂತಹದ್ದು ಎಂದು ಆಫ್ರಿದಿಗೆ ನೀಡಿದ ಜರ್ಸಿಯ ಮೇಲೆ ಕೊಹ್ಲಿ ಬರೆದಿದ್ದಾರೆ. 
ಈ ಜರ್ಸಿ ಮೇಲೆ ಕೊಹ್ಲಿ ಸೇರಿದಂತೆ ಟೀಂ ಇಂಡಿಯಾದ ಆಟಗಾರರಾದ ಯುವರಾಜ್ ಸಿಂಗ್, ಆಶಿಶ್ ನೆಹ್ರಾ, ಜಸ್ ಪ್ರೀತ್ ಬೂಮ್ರಾ, ಸುರೇಶ್ ರೈನಾ, ಪವನ್ ನೇಗಿ, ಮಹಮ್ಮದ್ ಶಮಿ, ರವಿಚಂದ್ರನ್ ಅಶ್ವಿನ್, ಹಾರ್ದಿಕ್ ಪಾಂಡ್ಯ ಮತ್ತು ಭಾರತ ತಂಡದ ಮಾಜಿ ನಿರ್ದೇಶಕ ರವಿಶಾಸ್ತ್ರಿ ಸಹಿ ಮಾಡಿದ್ದಾರೆ. 
ಬೂಮ್ ಬೂಮ್ ಆಫ್ರಿದಿ ಇದೇ ಫೆಬ್ರವರಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಘೋಷಿಸಿದ್ದರು. ಕೊಹ್ಲಿ ನೀಡಿರುವ ಜರ್ಸಿಯನ್ನು ಇತ್ತೀಚೆಗೆ ಪಾಕಿಸ್ತಾನದ ಪತ್ರಕರ್ತರೊಬ್ಬರು ಟ್ವಿಟರ್ ನಲ್ಲಿ ಹಾಕಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com