ಧೋನಿ ಭರ್ಜರಿ ಬ್ಯಾಟಿಂಗ್; ಹೈದರಾಬಾದ್ ವಿರುದ್ಧ ಗೆದ್ದ ಪುಣೆ

ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ...
ಎಂಎಸ್ ಧೋನಿ
ಎಂಎಸ್ ಧೋನಿ

ಪುಣೆ: ಸನ್ ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡ 6 ವಿಕೆಟ್ ಗಳ ಭರ್ಜರಿ ಜಯ ಗಳಿಸಿದೆ.

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ನಡೆದ ಐಪಿಎಲ್ 10ನೇ ಆವೃತ್ತಿ 24ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡ ಮೊದಲು ಬ್ಯಾಟಿಂಗ್ ಮಾಡಿದ್ದು 3 ವಿಕೆಟ್ ನಷ್ಟಕ್ಕೆ 176 ರನ್ ಪೇರಿಸಿತು. ಇದರೊಂದಿಗೆ 177 ರನ್ ಗಳ ಗುರಿ ಪಡೆದ ಪುಣೆ ಪರ ಎಂಎಸ್ ಧೋನಿ ಅಜೇಯ 61 ರನ್ ಗಳ ನೆರವಿನೊಂದಿಗೆ ತಂಡ ಗೆಲುವಿನ ನಗೆ ಬೀರಿತು.

ಸತತ ವೈಪಲ್ಯದಿಂದ ಟೀಕಾಕಾರರ ಕೆಂಗಣ್ಣಿಗೆ ಗುರಿಯಾಗಿದ್ದ ಭಾರತ ತಂಡದ ಮಾಜಿ ನಾಯಕ ಧೋನಿ ಪಂದ್ಯವನ್ನು ಗೆಲ್ಲಿಸುವ ಮೂಲಕ ಟೀಕೆ ಟಿಪ್ಪಣಿಗಳಿಗೂ ತನ್ನ ಬ್ಯಾಟ್ ನಿಂದಲೇ ಉತ್ತರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com