ಭಾರತ ಮೊದಲ ಇನ್ನಿಂಗ್ಸ್ 687/6 ರನ್ ಡಿಕ್ಲೇರ್; ಬಾಂಗ್ಲಾ 41/1; ಕೊಹ್ಲಿ ದ್ವಿಶತಕ, ಸಹಾ ಅಜೇಯ 106

ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ರನ್ ದಾಖಲಿಸಿದ್ದು, 687 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ.
ಶತಕ ಸಿಡಿಸಿದ ಸಹಾ
ಶತಕ ಸಿಡಿಸಿದ ಸಹಾ

ಹೈದರಾಬಾದ್: ಪ್ರವಾಸಿ ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ಟೆಸ್ಟ್ ಪಂದ್ಯದಲ್ಲಿ ಭಾರತ ಬೃಹತ್ ರನ್ ದಾಖಲಿಸಿದ್ದು, 687 ರನ್ ಗಳಿಗೆ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿದೆ. ನಂತರ ಬ್ಯಾಟ್ ಮಾಡಿದ ಬಾಂಗ್ಲಾದೇಶ ದಿನದಾಂತ್ಯಕ್ಕೆ ಮೊದಲ ಇನ್ನಿಂಗ್ಸ್ ನಲ್ಲಿ 1 ವಿಕೆಟ್ ಕಳೆದುಕೊಂಡು 41 ರನ್ ಗಳಿಸಿತ್ತು.

ನಿನ್ನೆ ದಿನದಾಟದಂತ್ಯಕ್ಕೆ 3 ವಿಕೆಟ್ ನಷ್ಟಕ್ಕೆ 356 ರನ್ ಗಳಿಸಿದ್ದ ಭಾರತ ಇಂದು ನಾಯಕ ವಿರಾಟ್ ಕೊಹ್ಲಿ (204 ರನ್), ರಹಾನೆ (50 ರನ್) ಮತ್ತು ವೃದ್ಧಿಮಾನ್ ಸಹಾ (ಅಜೇಯ 103 ರನ್) ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ  ನೆರವಿನಿಂದ 687 ರನ್ ಗಳ ಬೃಹತ್ ಮೊತ್ತವನ್ನು ಪೇರಿಸಿತು. ನಿನ್ನೆ ಅಜೇಯ ಶತಕ ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದ ವಿರಾಟ್ ಕೊಹ್ಲಿ ಇಂದು ಮತ್ತೊಂದು ಶತಕ ಸಿಡಿಸುವ ಮೂಲಕ ನಿರಂತರ ನಾಲ್ಕು ಸರಣಿಗಳಲ್ಲಿ ಸತತ 4ನೇ  ದ್ವಿಶತಕ ಸಿಡಿಸುವ ಮೂಲಕ ಈ ಸಾಧನೆ ಮಾಡಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರು.

ಅಂತೆಯೇ ನಿನ್ನೆ 45 ರನ್ ಗಳಿಸಿ ಅರ್ಧಶತಕದಂಚಿನಲ್ಲಿದ್ದ ರಹಾನೆ ಇಂದು 82 ರನ್ ಗಳಿಸಿ ತೈಜುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು. ಬಳಿಕ ಕೊಹ್ಲಿ ದ್ವಿಶತಕ ಗಳಿಸುತ್ತಿದ್ದಂತೆಯೇ ಮತ್ತದೇ ತೈಜುಲ್ ಇಸ್ಲಾಂಗೆ ವಿಕೆಟ್ ಒಪ್ಪಿಸಿದರು.  ಬಳಿಕ ಬಂದ ಸಹಾ ಮತ್ತು ಅಶ್ವಿನ್ ರಕ್ಷಣಾತ್ಮಕ ಆಟಕ್ಕೆ ಮೊರೆ ಹೋದರು. ಈ ವೇಳೆ 34 ರನ್ ಗಳಿಸಿದ್ದ ಅಶ್ವಿನ್ ಮಿರ್ಜಾ ಬೌಲಿಂಗ್ ನಲ್ಲಿ ಕ್ಯಾಚಿತ್ತು ಹೊರ ನಡೆದರು. ಬಳಿಕ ಸಹಾ ಜೊತೆಗೂಡಿದ ರವೀಂದ್ರ ಜಡೇಜಾ ಉತ್ತಮ ಸಾಥ್  ನೀಡಿದರು. ಮುರಿಯದ 7ನೇ ವಿಕೆಟ್ ಜೊತೆಯಾಟದಲ್ಲಿ ಈ ಜೋಡಿ 118 ರನ್ ಗಳ ಉತ್ತಮ ಜೊತೆಯಾಟ ನೀಡಿತು. ಪರಿಣಾಮ ಭಾರತದ ರನ್ ಗಳಿಕೆ 650ರ ಗಡಿ ದಾಟಿತು. ಅಂತಿಮವಾಗಿ ಸಹಾ ಆಕರ್ಷಕ ಶತಕ ಸಿಡಿಸಿದ ಬಳಿಕ  ನಾಯಕ ವಿರಾಟ್ ಕೊಹ್ಲಿ ಮೊದಲ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಮಾಡಿಕೊಂಡರು.

ಟೆಸ್ಟ್ ಇತಿಹಾಸದಲ್ಲೇ ಭಾರತದ 4ನೇ ಬೃಹತ್ ಮೊತ್ತ
ಇನ್ನ ಭಾರತ ದಾಖಲಿಸಿದ 687 ರನ್ ಗಳು ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲೇ ನಾಲ್ಕನೇ ಬೃಹತ್ ಮೊತ್ತವಾಗಿ ದಾಖಲಾಗಿದೆ. ಈ ಹಿಂದೆ 2016 ಡಿಸೆಂಬರ್ 16ರಂದು ಇಂಗ್ಲೆಂಡ್ ವಿರುದ್ಧ ಭಾರತ 759 ರನ್ ಗಳಿಸಿತ್ತು. ಇದು ಈ ವರೆಗಿನ  ಭಾರತದ ಬೃಹತ್ ಮೊತ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com