ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆ ಬಗ್ಗೆ ವಾಸಿಂ-ವಕಾರ್ ವಾಗ್ಯುದ್ಧ

ಅನಿಲ್ ಕುಂಬ್ಳೆ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಸಾಧನೆ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಂ ಮತ್ತು ವಕಾರ್ ಯೂನಿಸ್ ಟ್ವೀಟರ್ ನಲ್ಲಿ ಪರಸ್ಪರ...
ಅನಿಲ್ ಕುಂಬ್ಳೆ, ವಕಾರ್ ಯೂನಿಸ್, ವಾಸಿಂ ಅಕ್ರಂ
ಅನಿಲ್ ಕುಂಬ್ಳೆ, ವಕಾರ್ ಯೂನಿಸ್, ವಾಸಿಂ ಅಕ್ರಂ
Updated on
ಕರಾಚಿ: ಅನಿಲ್ ಕುಂಬ್ಳೆ ಇನ್ನಿಂಗ್ಸ್ ಒಂದರಲ್ಲಿ 10 ವಿಕೆಟ್ ಸಾಧನೆ ಕುರಿತು ಪಾಕಿಸ್ತಾನದ ಮಾಜಿ ಕ್ರಿಕೆಟಿಗರಾದ ವಾಸಿಂ ಅಕ್ರಂ ಮತ್ತು ವಕಾರ್ ಯೂನಿಸ್ ಟ್ವೀಟರ್ ನಲ್ಲಿ ಪರಸ್ಪರ ಕೆಸರೆರಚಾಟ ನಡೆಸಿದ್ದಾರೆ. 
ಅನಿಲ್ ಕುಂಬ್ಳೆ 10 ವಿಕೆಟ್ ಸಾಧನೆ ಮಾಡಿದ್ದು ಪಾಕಿಸ್ತಾನದ ವಿರುದ್ಧ. ಈ ಪಂದ್ಯದಲ್ಲಿ ಕೊನೆಯದಾಗಿ ಕ್ರಿಸ್ ನಲ್ಲಿ ಇದ್ದದ್ದು ವಾಸಿಂ ಅಕ್ರಂ ಮತ್ತು ವಕಾರ್ ಯೂನಿಸ್ ಅಂದು ಮನಸ್ಸು ಮಾಡಿದ್ದರೆ ವಾಕರ್ ರನೌಟ್ ಆಗಬಹುದಿತ್ತು. ಈ ಮೂಲಕ ಕುಂಬ್ಳೆ ದಾಖಲೆ ತಪ್ಪಿಸಬಹುದಿತ್ತು ಎಂದು ಅಕ್ರಂ ಪ್ರಕಟಿಸಿದ್ದರು. ಇದಕ್ಕೆ ವಕಾರ್ ತನ್ನ ಮೇಲಿನ ಎಲ್ಲ ಆರೋಪ ನಿರಾಕರಿಸಿದ್ದಾರೆ. ಮಾತ್ರವಲ್ಲ ಅಕ್ರಂಗೆ ವಯಸ್ಸಾಗಿದೆ ಎಂದು ಪ್ರತಿ ಟ್ವೀಟ್ ಮಾಡಿದ್ದಾರೆ. 
1999ರಲ್ಲಿ ದೆಹಲಿಯಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಟೆಸ್ಟ್ ಪಂದ್ಯದ ಇನ್ನಿಂಗ್ಸ್ ಒಂದರಲ್ಲಿ ಅನಿಲ್ ಕುಂಬ್ಳೆ 10 ವಿಕೆಟ್ ಕಬಳಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಈ ದಾಖಲೆ ಆಗಿ ಇತ್ತೀಚೆಗೆ 18 ವರ್ಷಗಳಾಗಿವೆ. 18 ವರ್ಷದ ಸಂಭ್ರಮವನ್ನು ಕುಂಬ್ಳೆ ಆಚರಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com