ಆರ್ ಅಶ್ವಿನ್ ಬಾಂಗ್ಲಾ ಕ್ರಿಕೆಟಿಗ ಮುಷ್ಪಿಕರ್ ರಹೀಮ್ ಆಟೋಗ್ರಾಫ್ ಕೇಳಿದ್ದೇಕೆ?

ಹೈದರಾಬಾದ್ ನಲ್ಲಿ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಬಾಂಗ್ಲಾ ಕ್ರಿಕೆಟಿಗರಿಗೆ ಕಹಿಯನ್ನುಂಟು ಮಾಡಿರಬಹುದು. ಆದರೆ ಟೀಂ ಇಂಡಿಯಾ ಮಟ್ಟಿಗೆ ಸಾಕಷ್ಟು ನೆನಪಿನ ಬುತ್ತಿಗಳನ್ನು ಕಟ್ಟಿಕೊಟ್ಟಿದೆ.
ರಹೀಮ್ ವಿಕೆಟ್ ಪಡೆದ ಅಶ್ವಿನ್ (ಸಂಗ್ರಹ ಚಿತ್ರ)
ರಹೀಮ್ ವಿಕೆಟ್ ಪಡೆದ ಅಶ್ವಿನ್ (ಸಂಗ್ರಹ ಚಿತ್ರ)

ಹೈದರಾಬಾದ್: ಹೈದರಾಬಾದ್ ನಲ್ಲಿ ಮುಕ್ತಾಯವಾದ ಬಾಂಗ್ಲಾದೇಶ ವಿರುದ್ಧ ಏಕೈಕ ಟೆಸ್ಟ್ ಪಂದ್ಯ ಬಾಂಗ್ಲಾ ಕ್ರಿಕೆಟಿಗರಿಗೆ ಕಹಿಯನ್ನುಂಟು ಮಾಡಿರಬಹುದು. ಆದರೆ ಟೀಂ ಇಂಡಿಯಾ ಮಟ್ಟಿಗೆ ಸಾಕಷ್ಟು ನೆನಪಿನ ಬುತ್ತಿಗಳನ್ನು  ಕಟ್ಟಿಕೊಟ್ಟಿದೆ.

ಒಂದೆಡೆ ಬ್ಯಾಟಿಂಗ್ ನಲ್ಲಿ ಕೊಹ್ಲಿ ದ್ವಿಶತಕ ಸಿಡಿಸಿ ಸತತ ನಾಲ್ಕು ಸರಣಿಗಳಲ್ಲಿ ನಿರಂತರ ದ್ವಿಶತಕ ಸಿಡಿಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಭಾಜನರಾದರೇ, ನಾಯಕರಾಗಿ ಸತತ 6 ಟೆಸ್ಟ್ ಸರಣಿ ಗೆದ್ದ ದಾಖಲೆಯನ್ನೂ  ಕೊಹ್ಲಿ ಬರೆದರು. ಅಂತೆಯೇ ಇದೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತೀ ಹೆಚ್ಚು ಶತಕಗಳನ್ನು ಸಿಡಿಸಿದ ಟಾಪ್ ಟೆನ್ ಆಟಗಾರರ ಪಟ್ಟಿಗೂ ಸೇರ್ಪಡೆಯಾದರು. ಈ ಮೂಲಕ ಈ ಪಟ್ಟಿ ಸೇರಿದೆ ಅತಿ ಕಿರಿಯ  ಕ್ರಿಕೆಟಿಗ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾದರು.

ಕೇವಲ ಕೊಹ್ಲಿ ಮಾತ್ರವಲ್ಲದೇ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಪಂದ್ಯ ಭಾರತದ ಸ್ಪಿನ್ ರೂವಾರಿ ಆರ್ ಅಶ್ವಿನ್ ಗೂ ತುಂಬಾ ಪ್ರಮುಖವಾಗಿದೆ. ಏಕೆಂದರೆ ಈ ಪಂದ್ಯದಲ್ಲಿ ಅಶ್ವಿನ್ ಎರಡೂ ಇನ್ನಿಂಗ್ಸ್ ಗಳಿಂದ ಒಟ್ಟು 6 ವಿಕೆಟ್ ಗಳನ್ನು  ಕಬಳಿಸಿದರು. ಆ ಮೂಲಕ ಇದೇ ಪಂದ್ಯದಲ್ಲಿ ಅಶ್ವಿನ್ ಟೆಸ್ಟ್ ನಲ್ಲಿ 250 ವಿಕೆಟ್ ಸಾಧೆನೆಗೆ ಪಾತ್ರರಾದರು. ವಿಶೇಷವೆಂದರೆ ಈ ಟೆಸ್ಟ್ ಪಂದ್ಯದ ವೇಳೆ ಅಶ್ವಿನ್ ಬಾಂಗ್ಲಾ ಕ್ರಿಕೆಟಿಗ ಮುಷ್ಪಿಕರ್ ರಹೀಮ್ ಅವರ ಆಟೋಗ್ರಾಫ್  ಕೇಳಿದ್ದರಂತೆ. ಇದಕ್ಕೆ ಕಾರಣವೆಂದರೆ ಅಶ್ವಿನ್ ಅವರ 250ನೇ ವಿಕೆಟ್ ರೂಪದಲ್ಲಿ ಮುಷ್ಫಿಕರ್ ರಹೀಮ್ ಔಟ್ ಆಗಿದ್ದರಂತೆ. ಇದೇ ಕಾರಣಕ್ಕೆ ಅಶ್ವಿನ್ ಬಾಲ್ ಮೇಲೆ ಮುಷ್ಫಿಕರ್ ರಹೀಮ್ ಅವರ ಸಹಿ ಕೇಳಿದ್ದರು.

ಈ ಬಗ್ಗೆ ಸ್ವತಃ ಮುಷ್ಪಿಕರ್ ರಹೀಮ್ ಹೇಳಿಕೊಂಡಿದ್ದು, ಅಶ್ವಿನ್ ಅವರ 250ನೇ ವಿಕೆಟ್ ರೂಪದಲ್ಲಿ ನಾನು ಔಟಾಗಿದ್ದೆ..ಹೀಗಾಗಿ ಬಾಲ್ ಮೇಲೆ ನನ್ನ ಆಟೋಗ್ರಾಫ್ ಕೇಳಿದ್ದರು. ಅಲ್ಲದೆ ಅಶ್ವಿನ್ ಡೆನ್ನಿಸ್ ಲಿಲ್ಲಿ ಅವರ ದಾಖಲೆಯನ್ನು  ಹಿಂದಿಕ್ಕಿದರು ಎಂಬ ವಿಚಾರ ತಿಳಿಯಿತು ಎಂದು ಹೇಳಿದ್ದಾರೆ.

ಇಂತಹುದೇ ಗುಣ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರಿಗೂ ಕೂಡ ಇತ್ತು. ಈ ಹಿಂದೆ ಧೋನಿ ತಾವು ಗೆದ್ದ ಪ್ರತೀ ಪಂದ್ಯದ ವಿಕೆಟ್ ಗಳಲ್ಲಿ ಒಂದನ್ನು ತಮ್ಮ ನೆನಪಿಗಾಗಿ ಒಯ್ಯುತ್ತಿದ್ದರು. ಇದು ಸಾಕಷ್ಟು  ಚರ್ಚೆಗೆ ಕಾರಣವಾಗಿತ್ತು. ಆದರೆ ಬಳಿಕ ಎಲ್ ಇಡಿ ತಂತ್ರಜ್ಞಾನದ ವಿಕೆಟ್ ಗಳ ಆವಿಷ್ಕಾರವಾದ ಬಳಿಕ ಇದೀಗ ಧೋನಿ ವಿಕೆಟ್ ತೆಗೆದುಕೊಂಡು ಹೋಗಲು ಅಂಪೈರ್ ಗಳೇ ಬಿಡುತ್ತಿಲ್ಲ. ಕಾರಣ ಈ ಎಲ್ ಇಡಿ ಲೈಟ್ ವಿಕೆಟ್ ಗಳು  ತುಂಬಾ ದುಬಾರಿಯಂತೆ...!

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com