ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವಿರಾಟ್ ಕೊಹ್ಲಿ!

ಏಕದಿನ ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.
ಕ್ರಿಕ್ ಇನ್ಫೋ ಚಿತ್ರ
ಕ್ರಿಕ್ ಇನ್ಫೋ ಚಿತ್ರ

ಕಿಂಗ್ಸ್ ಟನ್: ಏಕದಿನ ಕ್ರಿಕೆಟ್ ನಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಮುರಿದಿದ್ದಾರೆ.

ಜಮೈಕಾದ ಕಿಂಗ್ಸ್ ಟನ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಜೇಯ 111 ರನ್ ಗಳಿಸಿ ತಂಡಕ್ಕೆ 8 ವಿಕೆಟ್ ಗಳ ಜಯತಂದಿತ್ತಿದ್ದರು. ಈ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ  ವಿರಾಟ್ ಕೊಹ್ಲಿ ಭಾರತದ ಕ್ರಿಕೆಟ್ ದಂತಕಥೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರ ಅಪರೂಪದ ದಾಖಲೆಯೊಂದನ್ನು ಮುರಿದ್ದಾರೆ. ಚೇಸಿಂಗ್ ವೇಳೆ ಅತೀ ಹೆಚ್ಚು ಶತಕ ಗಳಿಸಿದ ದಾಖಲೆಯಲ್ಲಿ ವಿರಾಟ್ ಕೊಹ್ಲಿ ಸಚಿನ್  ತೆಂಡೂಲ್ಕರ್ ಅವರ ದಾಖಲೆಯನ್ನು ಮುರಿದಿದ್ದಾರೆ.

ವಿರಾಟ್ ಕೊಹ್ಲಿಗೆ ಇದು ವೃತ್ತಿ ಜೀವನದ 28ನೇ ಏಕದಿನ ಶತಕವಾಗಿದ್ದು, ಚೇಸಿಂಗ್ ವೇಳೆ ಅವರು ದಾಖಲಿಸಿದ 18ನೇ ಶತಕವಾಗಿದೆ. ಸಚಿನ್ ತೆಂಡೂಲ್ಕರ್ ಚೇಸಿಂಗ್ ವೇಳೆ 17 ಶತಕಗಳನ್ನು ದಾಖಲಿಸಿದ್ದು, ಈ ದಾಖಲೆಯನ್ನು  ಕೊಹ್ಲಿ ಹಿಂದಿಕ್ಕಿದ್ದಾರೆ.

ಇನ್ನು ಅಂಕಿಅಂಶಗಳು ಕೂಡ ಕೊಹ್ಲಿ ಪರವಾಗಿದ್ದು, ವಿರಾಟ್ ಕೊಹ್ಲಿ ಚೇಸಿಂಗ್ ವೇಳೆ ಕೇವಲ 102 ಇನ್ನಿಂಗ್ಸ್ ಗಳಲ್ಲಿ 18 ಶತಕ ಸಿಡಿಸಿದ್ದರೆ, ಸಚಿನ್ ತೆಂಡೂಲ್ಕರ್ 232 ಇನ್ನಿಂಗ್ಸ್ ಗಳಲ್ಲಿ 17 ಶತಕ ಸಿಡಿಸಿದ್ದಾರೆ. ಅಂತೆಯೇ ಕೊಹ್ಲಿ ಈ  ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದು, ಸಚಿನ್ 2ನೇ ಸ್ಥಾನಕ್ಕೆ ಕುಸಿದಿದ್ದಾರೆ. ಪಟ್ಟಿಯಲ್ಲಿ ಶ್ರೀಲಂಕಾದ ತಿಲಕರತ್ನೆ ದಿಲ್ಶಾನ್ 3ನೇ ಸ್ಥಾನದಲ್ಲಿದ್ದು, ಅವರು 116 ಇನ್ನಿಂಗ್ಸ್ ಗಳಲ್ಲಿ 11 ಶತಕಗಳನ್ನು ಸಿಡಿಸಿದ್ದಾರೆ.

ಇದೇ ವೇಳೆ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ವಿಂಡೀಸ್ ನೆಲದಲ್ಲಿ ವಿಂಡೀಸ್ ವಿರುದ್ಧ 2 ಶತಕ ಸಿಡಿಸಿದ ಮೊದಲ ಭಾರತೀಯ ನಾಯಕ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಈ ಹಿಂದೆ ದ್ರಾವಿಡ್ ನಾಯಕರಾಗಿದ್ದ  ಸಂದರ್ಭದಲ್ಲಿ ವಿಂಡೀಸ್ ನೆಲದಲ್ಲಿ ಶತಕ ಸಿಡಿಸಿದ್ದರು. ಅಂತೆಯೇ ವಿಂಡೀಸ್ ವಿರುದ್ಧದ ತಮ್ಮ ಶತಕಗಳ ಸಂಖ್ಯೆಯನ್ನು ಕೊಹ್ಲಿ ನಾಲ್ಕಕ್ಕೆ ಏರಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com