ನನ್ನ ವೈಫಲ್ಯಗಳನ್ನು ಮಾತ್ರ ಜನ ಎಣಿಸುತ್ತಾರೆ, ಅದಕ್ಕೆ ನಾನು ಕೇರ್ ಮಾಡೋಲ್ಲ: ಕೊಹ್ಲಿ

Published On :
ಗಾಲೆ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಎಷ್ಟು ಇನಿಂಗ್ಸ್ ಗಳಿಂದ ರನ್ ಗಳಿಸಿಲ್ಲ, ವೈಫಲ್ಯ ಕಂಡಿದ್ದಾರೆ ಎನ್ನುವುದನ್ನು ಮಾತ್ರ ಜನರು, ಟೀಕಾಕಾರರು ಎಣಿಸುತ್ತಾರೆ. ಅವುಗಳಿಗೆ ನಾನು ಕೇರ್ ಮಾಡುವುದಿಲ್ಲ ಎಂದು ಕೊಹ್ಲಿ ಹೇಳಿದ್ದಾರೆ.
ಗಾಲೆಯಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟೀಂ ಇಂಡಿಯಾ ಜಯ ಗಳಿಸಿದ ನಂತರ ಮಾತನಾಡಿದ ವಿರಾಟ್ ಕೊಹ್ಲಿ, ಜನರ ದೃಷ್ಟಿಯಿಂದ ನಾನು ಪಂದ್ಯವನ್ನಾಗಲಿ ಯಾವುದೇ ವಿಚಾರವನ್ನಾಗಿ ನೋಡುವುದಿಲ್ಲ. ಆಡುವ ಬಳಗದಿಂದ ಹೊರಗಿದ್ದ ವ್ಯಕ್ತಿಗಳು ಎಷ್ಟು ಇನಿಂಗ್ಸ್ ಗಳಿಂದ ಆಟಗಾರ ವೈಫಲ್ಯ ಕಂಡಿದ್ದಾನೆ ಎಂದು ಎಣಿಸುತ್ತಿರುತ್ತಾರೆ. ಆದರೆ ಆಡುವ ಬಳಗದಲ್ಲಿದ್ದ ಆಟಗಾರನಿಗೆ ಆ ಪರಿಸ್ಥಿತಿಗೆ ತಕ್ಕಂತೆ ಹೇಗೆ ಆಡಬೇಕು ಎನ್ನುವುದೇ ಮುಖ್ಯವಾಗಿರುತ್ತದೆ ಎಂದು ಹೇಳಿದ್ದಾರೆ.
ಟೆಸ್ಟ್ ಪಂದ್ಯದ ಎರಡನೇ ಇನಿಂಗ್ಸ್ ನಲ್ಲಿ ನಾವು ಇನ್ನಷ್ಟು ಧನಾತ್ಮಕವಾಗಿ ಆಡಬೇಕಿತ್ತು. ಅಭಿನವ್ ಮುಕುಂದ್ ಜತೆ ಈ ಆಟ ಸಾಧ್ಯವಾಯಿತು. ಅತ್ಯಧಿಕ ರನ್ ದಾಖಲಿಸಿದ್ದರಿಂದ ನಿರಾಳವಾಗಿರಲು ಸಾಧ್ಯವಾಯಿತು ಎಂದರು.
ಶ್ರೀಲಂಕಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ 304 ರನ್ ಗಳಿಂದ ಜಯ ಗಳಿಸಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ ಕೇವಲ 3 ರನ್ ಗೆ ಔಟಾಗಿದ್ದ ವಿರಾಟ್ ಕೊಹ್ಲಿ ದ್ವಿತೀಯ ಇನ್ನಿಂಗ್ಸ್ ನಲ್ಲಿ 103 ರನ್ ಗಳಿಸಿದ್ದರು. ಇನ್ನು ಕೇವಲ 58ನೇ ಟೆಸ್ಟ್ ನಲ್ಲಿ 17ನೇ ಶತಕ ಬಾರಿಸಿದ ಸಾಧನೆಯನ್ನು ಕೊಹ್ಲಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


