ಚಾಂಪಿಯನ್ಸ್‌ ಟ್ರೋಫಿ 2017: ಭಾರತ–ಪಾಕ್ ಹೈ ವೋಲ್ಟೇಜ್ ಪಂದ್ಯ ಮತ್ತೆ ಆರಂಭ

ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಮತ್ತೆ ಆರಂಭವಾಗಿದ್ದು, ಆರಂಭಿಕ ಆಟಗಾರರಾದ...
ರೋಹಿತ್ ಶರ್ಮಾ, ಶಿಖರ್ ಧವನ್
ರೋಹಿತ್ ಶರ್ಮಾ, ಶಿಖರ್ ಧವನ್
ಬರ್ಮಿಂಗ್ ಹ್ಯಾಮ್: ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಮತ್ತೆ ಆರಂಭವಾಗಿದ್ದು, ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಅವರು ಉತ್ತಮ ಜೋತೆಯಾಟವಾಡುತ್ತಿದ್ದಾರೆ.
ಇಂದು ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಚಾಂಪಿಯನ್ಸ್‌ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಟಾಸ್‌ ಗೆದ್ದ ಪಾಕಿಸ್ತಾನ ಫೀಲ್ಡಿಂಗ್‌ ಆಯ್ದುಕೊಂಡಿದ್ದು, ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ವಿಕೆಟ್ ನಷ್ಟವಿಲ್ಲದೆ 74 ರನ್ ಗಳಿಸಿದೆ.
ಮಳೆಯಿಂದ ಪಂದ್ಯ 30 ನಿಮಿಷ ನಿಂತಿತ್ತು. ಈ ವೇಳೆ ಒವರ್‌ಗಳನ್ನು ಕಡಿತ ಮಾಡಿಲ್ಲ.
ಮೊದಲ ಬ್ಯಾಟ್ ಮಾಡಿದ ಭಾರತ ಉತ್ತಮ ಆರಂಭ ಪಡೆಯಿತಾದರು ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತು.  9.5 ಒವರ್‌ನಲ್ಲಿ ಮಳೆ ಆರಂಭವಾಯಿತು. ಎಚ್ಚರಿಕೆಯ ಆಟ ಆಡುತ್ತಿರುವ ಶಿಖರ್‌ ಧವನ್‌ ಮತ್ತು ರೋಹಿತ್‌ ಶರ್ಮಾ ಕ್ರೀಸ್‌ನಲ್ಲಿದ್ದಾರೆ.
ಜೋರಾಗಿ ಮಳೆ ಸುರಿಯುತ್ತಿರುವುದರಿಂದ ಪಂದ್ಯವನ್ನು ಅರ್ಧ ಗಂಟೆ  ನಿಲ್ಲಿಸಲಾಗಿತ್ತು.ಮಳೆರಾಯ ಬಿಡುವು ನೀಡಿರುವುದರಿಂದ ಒವರ್‌ಗಳನ್ನು ಕಡಿತಗೊಳಿಸದೆ ಮತ್ತೆ ಪಂದ್ಯವನ್ನು ಆರಂಭಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com