ಭಾರತ-ಪಾಕ್ ನಡುವೆ ಹೈ ವೋಲ್ಟೇಜ್ ಪಂದ್ಯ: ಕೊಹ್ಲಿ ಟೀಂ ಗೆ ಯೋಧರಿಂದ ಶುಭ ಹಾರೈಕೆ

ಬರ್ನಿಂಗ್ ಹ್ಯಾಮ್ ನಲ್ಲಿ ಭಾರತ-ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದ್ದು, ಕೊಹ್ಲಿ ಟೀಂ ಗೆ ಭಾರತೀಯ ಸೇನೆ ಶುಭ ಹಾರೈಸಿದೆ.
ಭಾರತೀಯ ಸೇನೆ
ಭಾರತೀಯ ಸೇನೆ
ಜಮ್ಮು: ಬರ್ಮಿಂಗ್ ಹ್ಯಾಮ್ ನಲ್ಲಿ  ಭಾರತ-ಪಾಕಿಸ್ತಾನ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದ್ದು, ಕೊಹ್ಲಿ ಟೀಂ ಗೆ ಭಾರತೀಯ ಸೇನೆ ಶುಭ ಹಾರೈಸಿದೆ. 
ಜಮ್ಮು-ಕಾಶ್ಮೀರದ ಯೋಧರು ಭಾರತೀಯ ತಂಡಕ್ಕೆ ಶುಭ ಹಾರೈಕೆಯ ಸಂದೇಶ ಕಳಿಸಿದ್ದು, ಭಾರತೀಯ ತಂಡ ಪಂದ್ಯದಲ್ಲಿ ಜಯಗಳಿಸಲಿದೆ ಎಂದು ಸೇನೆ ವಿಶ್ವಾಸ ವ್ಯಕ್ತಪಡಿಸಿದೆ. "ಹಮ್ ಹಿಂದೂಸ್ಥಾನಿ ಹಮ್ ಹಿಂದೂಸ್ಥಾನಿ", "ಸುನೊ ಗೌರ್ ಸೆ ದುನಿಯಾ ವಾಲೊ, ಬುರಿ ನಜರ್ ನ ಹಂಪೆ ದೌಲೊ" ಹಾಡು ಹಾಡುವ ಮೂಲಕ ಭಾರತೀಯ ಸೇನೆಯ ಯೋಧರು ಭಾರತ ತಂಡಕ್ಕೆ ಶುಭ ಹಾರೈಸಿದ್ದಾರೆ. 
ಭಾರತದ ಗಡಿಯಲ್ಲಿ ಪಾಕಿಸ್ತಾನದ ಪುಂಡಾಟಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವೂ ಹಾಳಾಗಿದೆ. ಈ ಹಿಂದೆ ಹಲವು ಬಾರಿ ಪಾಕಿಸ್ತಾನವನ್ನು ಸೋಲಿಸಿದ್ದೇವೆ, ಈ ಬಾರಿಯೂ ಪಾಕಿಸ್ತಾನ ಸೋಲಲಿದೆ, ಪಂದ್ಯ ವೀಕ್ಷಿಸಲು ಕಾತರದಿಂದ ಕಾಯುತ್ತಿದ್ದೇವೆ ಎಂದು ಬಿಎಸ್ ಎಫ್ ಯೋಧರೊಬ್ಬರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com