ಸೆಹ್ವಾಗ್ ಪ್ರಕಾರ ಆಫ್ ಸ್ಪಿನ್ನರ್ ಗಳು ಬೌಲರ್ ಗಳೇ ಅಲ್ಲ: ಅಶ್ವಿನ್

ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರಕಾರ ಆಫ್ ಸ್ಪಿನ್ನರ್ ಗಳು ಬೌಲರ್ ಗಳೇ ಅಲ್ಲ ಎಂದು ಟೀಂ ಇಂಡಿಯಾದ ಆಫ್ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ...
ವೀರೇಂದ್ರ ಸೆಹ್ವಾಗ್-ರವಿಚಂದ್ರನ್ ಅಶ್ವಿನ್
ವೀರೇಂದ್ರ ಸೆಹ್ವಾಗ್-ರವಿಚಂದ್ರನ್ ಅಶ್ವಿನ್
Updated on: 
ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಪ್ರಕಾರ ಆಫ್ ಸ್ಪಿನ್ನರ್ ಗಳು ಬೌಲರ್ ಗಳೇ ಅಲ್ಲ ಎಂದು ಟೀಂ ಇಂಡಿಯಾದ ಆಫ್ ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಹೇಳಿದ್ದಾರೆ. 
ವಾಟ್ ದಿ ಡಕ್ ಚಾಟ್ ಶೋವೊಂದರಲ್ಲಿ ಮಾತನಾಡಿದ್ದ ಆರ್ ಅಶ್ವಿನ್ ಕೆಲವೊಂದು ಇಂಟ್ರೆಸ್ಟಿಂಗ್ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಕೆಲ ವರ್ಷಗಳ ಹಿಂದೆ ಸ್ಫೋಟಕ ಬ್ಯಾಟ್ಸ್ ಮನ್ ಎಂದೇ ಖ್ಯಾತಿ ಗಳಿಸಿರುವ ವೀರೇಂದ್ರ ಸೆಹ್ವಾಗ್ ಮತ್ತು ಆರ್ ಅಶ್ವಿನ್ ನೆಟ್ ನಲ್ಲಿ ಅಭ್ಯಾಸ ಮಾಡುತ್ತಿದ್ದರಂತೆ ಆಗ ಅಶ್ವಿನ್ ಅವರ ಪ್ರತಿಯೊಂದು ಎಸೆತಕ್ಕೆ ಸೆಹ್ವಾಗ್ ಭರ್ಜರಿ ಹೊಡೆತಗಳನ್ನು ನೀಡುತ್ತಿದ್ದರು ಇದರಿಂದ ಬೇಸರಗೊಂಡ ಅಶ್ವಿನ್ ಸೆಹ್ವಾಗ್ ರನ್ನು ಯಾವ ರೀತಿ ಬೌಲಿಂಗ್ ಸುಧಾರಣೆ ಮಾಡಿಕೊಳ್ಳಬೇಕು ಎಂದು ಸಲಹೆ ಕೇಳಿದರಂತೆ ಅದಕ್ಕೆ ಸೆಹ್ವಾಗ್ ಜಂಬದ ಉತ್ತರವನ್ನು ನೀಡಿದ್ದರು ಎಂದು ಅಶ್ವಿನ್ ಬೇಸರ ವ್ಯಕ್ತಪಡಿಸಿದರು.
ಆಫ್ ಸ್ಪಿನ್ನರ್ ಬೌಲರ್ ಗಳು ನನ್ನ ಪ್ರಕಾರ ಬೌಲರ್ ಗಳೇ ಅಲ್ಲ. ಅವರ ಎಸೆತಗಳನ್ನು ಸುಭಲವಾಗಿ ಎದುರಿಸಿ ಭಾರೀ ಹೊಡೆತಗಳನ್ನು ನೀಡಬಲ್ಲೆ ಎಂದಿದ್ದರಂತೆ, ಇದಕ್ಕೆ ಅಶ್ವಿನ್ ಸಾರ್ ನೀವು ನನ್ನನ್ನು ಎದೆಗುಂದುವಂತೆ ಮಾಡುತ್ತಿದ್ದೀರಿ ಎಂದು ಹೇಳಿ ಅಲ್ಲಿಂದ ಹೊರ ನಡೆದ ಹೋಗಿದ್ದಾಗಿ ಎಂದು ಹೇಳಿದ್ದಾರೆ. 
ಮತ್ತೆ ಮರು ದಿನ ನೆಟ್ ಅಭ್ಯಾಸದ ವೇಳೆ ನಾನು ಮತ್ತೆ ವಿಭಿನ್ನ ಎಸೆತಗಳನ್ನು ಪ್ರಯೋಗಿಸಿದರು ಪ್ರಯೋಜನವಾಗಲಿಲ್ಲ. ಸೆಹ್ವಾಗ್ ನನ್ನ ಎಸೆತಗಳನ್ನು ವಿವಿಧ ವಲಯಗಳ ಕಡೆ ಬಾರಿಸಿದರು. ವಾಸ್ತವವಾಗಿ ಸೆಹ್ವಾಗ್ ನನ್ನು ರಸ್ತೆಯ ಕಸದಂತೆ ಕಾಣುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ. 
ಇದೇ ಪ್ರಶ್ನೆಯನ್ನು ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅಥವಾ ಮಾಜಿ ನಾಯಕ ಎಂಎಸ್ ಧೋನಿ ಅವರನ್ನು ಕೇಳಿದ್ದರೆ ಅದಕ್ಕೆ ಅವರು ಕೆಲವೊಂದು ಸಲಹೆಗಳನ್ನು ನೀಡುತ್ತಿದ್ದರು ಆದರೆ ಸೆಹ್ವಾಗ್ ಆ ರೀತಿ ಮಾಡಿರಲಿಲ್ಲ ಎಂದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com