ಸ್ವಹಿತಾಸಕ್ತಿ ಕುರಿತ ಸ್ಪಷ್ಟತೆಗಾಗಿ ಬಿಸಿಸಿಐಗೆ ರಾಹುಲ್ ದ್ರಾವಿಡ್ ಆಗ್ರಹ

ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಲ್ಲಿನ ಸ್ವಹಿತಾಸಕ್ತಿ ವಿಚಾರದ ನಿಯಮಕ್ಕೆ ಬದ್ಧನಾಗಿದ್ದು ಹಾಗಿದ್ದರೂ ಬಿಸಿಸಿಐನಿಂದ ಈ ಕುರಿತು...
ರಾಹುಲ್ ದ್ರಾವಿಡ್
ರಾಹುಲ್ ದ್ರಾವಿಡ್
Updated on: 
ಮುಂಬೈ: ಪ್ರಸ್ತುತ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ)ಯಲ್ಲಿನ ಸ್ವಹಿತಾಸಕ್ತಿ ವಿಚಾರದ ನಿಯಮಕ್ಕೆ ಬದ್ಧನಾಗಿದ್ದು ಹಾಗಿದ್ದರೂ ಬಿಸಿಸಿಐನಿಂದ ಈ ಕುರಿತು ಇನ್ನಷ್ಟು ಸ್ಪಷ್ಟತೆ ಸಿಗಬೇಕು ಎಂದು ಭಾರತ ಕಿರಿಯರ ತಂಡದ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ. 
ಸಿಒಎಗೆ ನನ್ನ ಸ್ಥಾನ ಹಾಗೂ ಅದರ ಹಿನ್ನೆಲೆ ಕುರಿತು ವಿವರಣೆ ನೀಡಿ ಪತ್ರ ಬರೆದಿದ್ದೇನೆ. ಬಿಸಿಸಿಐನಲ್ಲಿದ್ದ ನಿಯಮದ ಪ್ರಕಾರ ನಾನು ಯಾವುದೇ ಸ್ವಹಿತಾಸಕ್ತಿ ನಿಯಮ ಉಲ್ಲಂಘಿಸಿಲ್ಲ ಆದರೆ, ಒಪ್ಪಂದ ಅವಧಿಯಲ್ಲಿ ಬಿಸಿಸಿಐನಲ್ಲಿ ನಿಯಮಗಳು ಬದಲಾಗಿರುವ ಬಗ್ಗೆ ಮಾಹಿತಿ ಇಲ್ಲ. ನನ್ನ ಅನುಕೂಲಕ್ಕಾಗಿ ನಿಯಮವನ್ನು ಬದಲಾವಣೆ ಮಾಡಲಾಗಿದೆ ಹಾಗೂ ನಿಯಮ ಉಲ್ಲಂಘಿಸಿದ್ದೇನೆ ಎಂದು ಟೀಕೆ ಮಾಡುವುದರಲ್ಲಿ ಅರ್ಥವಿಲ್ಲ ಎಂದು ದ್ರಾವಿಡ್ ಹೇಳಿದ್ದಾರೆ. 
ಟೀಂ ಇಂಡಿಯಾ ಎ ಹಾಗೂ 19 ವಯೋಮಿತಿ ತಂಡಗಳಿಗೆ ದ್ರಾವಿಡ್ ಕೋಚ್ ಆಗಿದ್ದಾರೆ. ಅವರ ಅವಧಿ ಜೂನ್ ನಿಂದ ಮಾರ್ಚ್ ವರೆಗೆ 10 ತಿಂಗಳ ಗುತ್ತಿಗೆ ಮಾತ್ರ ನೀಡಲಾಗಿತ್ತು. ಉಳಿದ ಎರಡು ತಿಂಗಳ ಅವಧಿಯಲ್ಲಿ ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ತಂಡದ ಮೆಂಟರ್ ಆಗಿ ಕಾರ್ಯ ನಿರ್ವಹಿಸಿದ್ದರು. 
ಇತ್ತೀಚೆಗಷ್ಟೇ ಸಿಒಎ ಸದಸ್ಯ ಸ್ಥಾನಕ್ಕೆ ರಾಜಿನಾಮೆ ನೀಡಿರುವ ರಾಮಚಂದ್ರ ಗುಹಾ ಅವರು ರಾಹುಲ್ ದ್ರಾವಿಡ್ ವಿರುದ್ಧವೂ ಸ್ವಹಿತಾಸಕ್ತಿ ಆಱೋಪ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ರಾಹುಲ್ ಬಿಸಿಸಿಐ ಸ್ವಹಿತಾಸಕ್ತಿ ಕುರಿತು ನೀಡಬೇಕು ಎಂದು ಕೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com