ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ 2ನೇ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಮತ್ತು ಬಾಂಗ್ಲಾದೇಶ ಸೆಣೆಸಲಿದ್ದು, ಈ ಮಧ್ಯೆ ಬಾಂಗ್ಲಾದೇಶ ಮಾಜಿ ನಾಯಕ ಮೊಹಮ್ಮದ್ ಅಶ್ರಫುಲ್ ಭಾರತವನ್ನು ಮಣಿಸಲು ಶ್ರೀಲಂಕಾಗೆ ಸಾಧ್ಯವಾಗಿದ್ದಾಗ ನಮಗೆಕ್ಕಾಗಲ್ಲ ಎಂದು ಹೇಳಿದ್ದಾರೆ.
ಗ್ರೂಪ್ ಹಂತದಲ್ಲಿ ನ್ಯೂಜಿಲೆಂಡ್ ವಿರುದ್ಧ ಬಾಂಗ್ಲಾದೇಶ ಗೆದ್ದು ಬೀಗಿದೆ. ಅಂತೆ ಬಾಂಗ್ಲಾದೇಶದಲ್ಲಿ ಯುವ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದರಿಂದಾಗಿ ನಾಳೆ ಭಾರತ ನಡುವೆ ನಡೆಯಲಿರುವ ಪಂದ್ಯದಲ್ಲಿ ಟೀಂ ಇಂಡಿಯಾವನ್ನು ಬಾಂಗ್ಲಾದೇಶ ಮಣಿಸಲಿದೆ ಎಂಬ ಆಶಾವಾದವನ್ನು ಅಶ್ರಫುಲ್ ವ್ಯಕ್ತಪಡಿಸಿದ್ದಾರೆ.
ಇನ್ನು ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 300 ಗಡಿ ದಾಟಿದೆ. ಈಗಿರುವ ಭಾರತದ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ ಘರ್ಜಿಸಲಿದೆ. ಇನ್ನು ಮೊದಲ ಪವರ್ ಪ್ಲೇ ನಲ್ಲಿ ಆರಂಭಿಕ 3 ವಿಕೆಟ್ ಗಳನ್ನು ಬಾಂಗ್ಲಾ ಬೌಲರ್ ಗಳು ಪಡೆದರೆ ಆಗ ಟೀಂ ಇಂಡಿಯಾಗೆ ಬಲಿಷ್ಠ ಸ್ಪರ್ಧೆ ನೀಡಬಹುದು. ರುಬೆಲ್ ಮತ್ತು ಟಸ್ಕಿನ್ 140 ಪ್ಲಸ್ ವೇಗದಲ್ಲಿ ಟೀಂ ಇಂಡಿಯಾದ ಆರಂಭಿಕ ಆಟಗಾರರ ಮೇಲೆ ಬೌಲಿಂಗ್ ದಾಳಿ ಮಾಡಲಿದ್ದಾರೆ ಎಂದು ಅಶ್ರಫುಲ್ ಹೇಳಿದ್ದಾರೆ.