9 ವಿಕೆಟ್ ಗಳ ಅಂತರದಲ್ಲಿ ಜಯಿಸುತ್ತೇವೆ ಎಂದು ಭಾವಿಸಿರಲಿಲ್ಲ: ವಿರಾಟ್ ಕೊಹ್ಲಿ

ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ 9 ವಿಕೆಟ್ ಗಳ ಅಂತರದಲ್ಲಿ ಗೆಲುವ ಸಾಧಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
ಸುದ್ದಿಗೋಷ್ಠಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ

ಲಂಡನ್: ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭರ್ಜರಿ  9 ವಿಕೆಟ್ ಗಳ ಅಂತರದಲ್ಲಿ ಗೆಲುವ ಸಾಧಿಸುತ್ತೇವೆ ಎಂದು ಅಂದುಕೊಂಡಿರಲಿಲ್ಲ ಎಂದು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹೇಳಿದ್ದಾರೆ.

ನಿನ್ನೆ ನಡೆದ ಬಾಂಗ್ಲಾದೇಶದ ವಿರುದ್ಧ ನಡೆದ 2ನೇ ಸೆಮಿಫೈನಲ್ ಪಂದ್ಯದ ಬಳಿಕ ಮಾತನಾಡಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, "ಇಂದಿನ ಪಂದ್ಯ ಮತ್ತೊಂದು ಪರಿಪೂರ್ಣ ಪಂದ್ಯವಾಗಿತ್ತು. ಬಾಂಗ್ಲಾದೇಶಕ್ಕಿಂತ ಎಲ್ಲ ವಿಭಾಗಗಳಲ್ಲಿಯೂ ಭಾರತ ಪ್ರಾಬಲ್ಯ ಸಾಧಿಸಿತ್ತು. ಹೀಗಾಗಿ ಗೆಲುವು ನಮ್ಮದಾಯಿತು. ಆದರೆ ಈ ಪ್ರಮುಖ ಪಂದ್ಯದಲ್ಲಿ ಭರ್ಜರಿ 9 ವಿಕೆಟ್ ಗಳ ಅಂತರದ ಜಯ ಸಾಧಿಸುತ್ತೇವೆ ಎಂದು ನಾನು ಖಂಡಿತ ಎಣಿಸಿರಲಿಲ್ಲ. ನಿರೀಕ್ಷೆಗೂ ಮಿರಿದ ಜಯ ಇದಾಗಿದೆ ಎಂದು ಕೊಹ್ಲಿ ಬಣ್ಣಿಸಿದರು.

ಇಂದಿನ ಪಂದ್ಯ ನಮ್ಮ ತಂಡದ ಟಾಪ್ ಆರ್ಡರ್ ಬ್ಯಾಟಿಂಗ್ ನ ಸಾಮರ್ಥ್ಯವನ್ನು ಜಗತ್ತಿಗೆ ಪರಚಿಯಸಿದೆ. ಮಧ್ಯಮ ಕ್ರಮಾಂಕಕ್ಕೆ ಬ್ಯಾಟಿಂಗ್ ಮಾಡುವ ಅವಕಾಶ ಸಿಗದಿದ್ದರೆ ಚಿಂತಿಸುವ ಅಗತ್ಯವಿಲ್ಲ. ತೀರಾ ಆರಂಭದ ಘಟ್ಟದಲ್ಲೇ ಮಧ್ಯಮ ಕ್ರಮಾಂಕಗ ಬ್ಯಾಟ್ಸಮನ್ ಗಳು ಬ್ಯಾಟಿಂಗ್ ಆಗಮಿಸಿದರೆ ಆಗ ನೀವು ಖಂಡಿತಾ ಗಂಭೀರ ಚಿಂತನೆಯಲ್ಲಿ ತೊಡಗಬೇಕಾಗುತ್ತದೆ ಎಂದು ಕೊಹ್ಲಿ ಹೇಳಿದರು. ಇದೇ ವೇಳೆ ಕೇದಾರ್ ಜಾದವ್ ಆಟವನ್ನು ಕೊಂಡಾಡಿದ ಕೊಹ್ಲಿ. ಜಾದವ್ ಬಗ್ಗೆ ಜಾದವ್ ಬಗ್ಗೆ ಹೆಚ್ಚಾಗಿ ಏನೂ ಹೇಳುವುದು ಬೇಡ. ಆತನ ಪ್ರದರ್ಶನವೇ ಆತನ ಸಾಮರ್ಥ್ಯವನ್ನು ಸಾಬೀತು ಪಡಿಸಿದೆ. ಆತ ಅಚ್ಚರಿ ಪ್ಯಾಕೇಜ್ ಏನೂ ಅಲ್ಲ. ಓರ್ವ ಪರಿಪೂರ್ಣ ಕ್ರಿಕೆಟರ್..ಬ್ಯಾಟ್ಸಮನ್ ಗಳನ್ನು ಕಂಗೆಡಿಸಿ ಬೌಲಿಂಗ್ ಮಾಡುವ ಬಗೆ ಜಾದವ್ ಗೆ ಕರಗತವಾಗಿದೆ. ಬಹುಶಃ ಜಾದವ್ ಆ ಎರಡು ಪ್ರಮುಖ ವಿಕೆಟ್ ಗಳನ್ನು ಪಡೆಯದೇ ಹೋಗಿದ್ದ ಬಾಂಗ್ಲಾದೇಶ 300 ರನ್ ಗಳ ಆಸುಪಾಸಿಗೆ ಹೋಗುವ ಸಾಧ್ಯತೆ ಇತ್ತು ಎಂದು ಹೇಳಿದರು.

ಇನ್ನು ಫೈನಲ್ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಕೊಹ್ಲಿ, ಈ ಪ್ರಶ್ನೆಗ ನನ್ನ ಉತ್ತರ ನಿಮಗೆ ಬೋರ್ ಎನಿಸಬಹುದು.ಆದರೆ ಅದೇ ನಮ್ಮ ಮೈಂಡ್ ಸೆಟ್ ಆಗಿದ್ದು, ಪಾಕಿಸ್ತಾನದ ವಿರುದ್ಧದ ಪಂದ್ಯ ನಮಗೆ ಮತ್ತೊಂದು ಪಂದ್ಯವಷ್ಟೇ ಎಂದು ಕೊಹ್ಲಿ ಹೇಳಿದ್ದಾರೆ.

ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ಚಾಂಪಿಯನ್ಸ್‌ ಟ್ರೋಫಿಗಾಗಿ ಭಾನುವಾರ (ಜೂ.18)ರಂದು ಫೈನಲ್‌ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ಲೀಗ್‌ ಹಂತದ ಪಂದ್ಯದಲ್ಲಿ ಪಾಕ್‌ ವಿರುದ್ಧ ಭಾರತ 124 ರನ್‌ಗಳ ಭರ್ಜರಿ ಗೆಲುವು ಸಾಧಿಸಿತ್ತು. ಮೊದಲ ಸೆಮೀಸ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಗೆದ್ದು ಪಾಕ್‌ ಫೈನಲ್‌ ಪ್ರವೇಶಿಸಿತ್ತು. ವಿಶ್ವಾದ್ಯಂತ ಅಭಿಮಾನಿಗಳು ಈಗಾಗಲೇ ಭಾರತ-ಪಾಕ್‌ ಫೈನಲ್‌ ಪಂದ್ಯಕ್ಕಾಗಿ ತುದಿಗಾಲಲ್ಲಿ ನಿಂತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com