ಫೈನಲ್ ಕದನಕ್ಕೂ ಮುನ್ನ ಪಾಕ್ ನಾಯಕ ಸರ್ಫರಾಜ್ ಪುತ್ರನ ಜೊತೆ ಧೋನಿ!

ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಒಂದು ಫೋಟೋ ಇದೀಗ ವ್ಯಾಪಕ ವೈರಲ್ ಆಗಿದೆ.
ಸರ್ಫರಾಜ್ ಪುತ್ರ ಅಬ್ದುಲ್ಲಾ ಜೊತೆ ಧೋನಿ
ಸರ್ಫರಾಜ್ ಪುತ್ರ ಅಬ್ದುಲ್ಲಾ ಜೊತೆ ಧೋನಿ
Updated on: 

ಲಂಡನ್: ಭಾರತ ಮತ್ತು ಪಾಕಿಸ್ತಾನ ನಡುವಿನ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿರುವಂತೆಯೇ ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಒಂದು ಫೋಟೋ ಇದೀಗ  ವ್ಯಾಪಕ ವೈರಲ್ ಆಗಿದೆ.

ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಭಾರತ ತಂಡದ ಮಾಜಿನಾಯಕ ಧೋನಿ ಪಾಕಿಸ್ತಾನ ತಂಡದ ನಾಯಕ ಸರ್ಫರಾಜ್ ಖಾನ್ ಅವರ ಕುಟುಂಬದೊಂದಿಗೆ ಕೆಲ ಕ್ಷಣಗಳನ್ನು ಕಳೆದಿದ್ದು, ಸರ್ಫರಾಜ್ ಪುತ್ರ ಅಬ್ದುಲ್ಲಾ ನನ್ನು  ಎತ್ತಿಕೊಂಡು ಚಿತ್ರ ತೆಗೆಸಿಕೊಂಡಿದ್ದಾರೆ. ಧೋನಿ ಅವರ ಈ ಕಾರ್ಯ ವ್ಯಾಪಕ ಶ್ಲಾಘನೆಗೆ ಪಾತ್ರವಾಗಿದ್ದು, ಉಭಯ ದೇಶಗಳ ನಡುವೆ ಗಡಿ ತಗಾದೆ ಹೊರತಾಗಿಯೂ ಧೋನಿ ಕಾರ್ಯ ಸಾಮರಸ್ಯ ಬೆಸೆಯುವ ಪ್ರಯತ್ನವಾಗಿದೆ  ಎಂದು ಹಲವರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಧೋನಿ ಅವರ ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ವೈರಲ್ ಆಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com