ಕೊಹ್ಲಿ ಅದ್ಬುತ ನಾಯಕ, ತಂಡವನ್ನು ಮುನ್ನಡೆಸಲು ಅವರೇ ಸೂಕ್ತ: ಆ್ಯಡಂ ಗಿಲ್ ಕ್ರಿಸ್ಟ್
ಲಂಡನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅದ್ಬುತ ನಾಯಕತ್ವ ಗುಣಹೊಂದಿದ್ದು, ತಂಡವನ್ನು ಮುನ್ನಡೆಸಲು ಅವರೇ ಸೂಕ್ತ ವ್ಯಕ್ತಿ ಎಂದು ಆಸ್ಟ್ರೇಲಿಯಾ ಮಾಜಿ ಕ್ರಿಕೆಟಿಗ ಆ್ಯಡಂ ಗಿಲ್ ಕ್ರಿಸ್ಟ್ ಹೇಳಿದ್ದಾರೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಹೀನಾಯ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ನಾಯಕ ವಿರಾಟ್ ಕೊಹ್ಲಿ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬರುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಆ್ಯಡಂ ಗಿಲ್ ಕ್ರಿಸ್ಟ್, "ಪಾಕಿಸ್ತಾನ ತಂಡವನ್ನು ಹೀಗೇ ಎಂದು ಪರಿಗಣಿಸಲು ಸಾಧ್ಯವಿಲ್ಲ. ಯಾವುದೇ ಕ್ಷಣದಲ್ಲಾದರೂ ಆ ತಂಡ ತಿರುಗಿ ಬೀಳುವ ಸಾಧ್ಯತೆ ಇದೆ. ಇನ್ನು ಚಾಂಪಿಯನ್ ಷಿಪ್ ಟೂರ್ನಿಯಲ್ಲಿ ಪಾಕಿಸ್ತಾನದ ಪ್ರದರ್ಶನ ಅಚ್ಚರಿ ಏನಿಲ್ಲ. ಈ ಏಕದಿನ ಕ್ರಿಕೆಟ್ ವಿಶೇಷವೇ ಇದು. ಯಾವುದೇ ತಂಡವಾದರೂ ಯಾವುದೇ ತಂಡವನ್ನು ಮಣಿಸಬಹುದು ಎಂದು ಹೇಳಿದ್ದಾರೆ.
ಅಂತೆಯೇ ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ ಮಾಡಿರುವ ಕೊಹ್ಲಿ, ವಿರಾಟ್ ಕೊಹ್ಲಿ ಓರ್ವ ಅದ್ಬುತ ನಾಯಕ. ಭಾರತ ತಂಡವನ್ನು ಮುನ್ನಡೆಸಲು ಅವರೇ ಸೂಕ್ತ ವ್ಯಕ್ತಿಯಾಗಿದ್ದು, ಅತ್ಯುತ್ತಮ ನಾಯಕತ್ವ ಗುಣ ಹೊಂದಿದ್ದಾರೆ ಎಂದು ಗಿಲ್ ಕ್ರಿಸ್ಟ್ ಹೇಳಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ