ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ತಂಡದ ಕೋಚ್ ಇಲ್ಲದೆ ಪ್ರವಾಸವೊಂದನ್ನು ಕೈಗೊಂಡಿದೆ. ವಿರಾಟ್ ಕೊಹ್ಲಿ ಮತ್ತು ಅನಿಲ್ ಕುಂಬ್ಳೆ ನಡುವಿನ ಮನಸ್ತಾಪದಿಂದಾಗಿ ಕುಂಬ್ಳೆ ಅವರು ಕೋಚ್ ಹುದ್ದೆಗೆ ದಿಢೀರ್ ರಾಜಿನಾಮೆ ನೀಡಿದ್ದರು. ಇದರಿಂದ ಬಿಸಿಸಿಐ ಕೋಚ್ ಆಯ್ಕೆ ಮಾಡಲು ಸಾಧ್ಯವಾಗಿಲ್ಲ. ಸದ್ಯ ವೆಸ್ಟ್ ಇಂಡೀಸ್ ನಲ್ಲಿ ಬೀಡು ಬಿಟ್ಟಿರುವ ಟೀಂ ಇಂಡಿಯಾ ಆಟಗಾರರು ಕೋಚ್ ಇಲ್ಲದೆ ಅಭ್ಯಾಸದಲ್ಲಿ ತೊಡಗಿದೆ.