ಸಿಡ್ನಿ: ಗೆಳತಿ ಡ್ಯಾನಿ ವಿಲ್ಲಿಸ್ ಜತೆ ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ನಾಯಕ ಸ್ಟೀವನ್ ಸ್ಮಿತ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಕಾನೂನು ವ್ಯಾಸಂಗ ಮಾಡುತ್ತಿರುವ 26 ವರ್ಷದ ವಿಲ್ಲಸ್ ಗೆ 28 ವರ್ಷದ ಸ್ಮಿತ್ ನ್ಯೂಯಾರ್ಕ್ ನಲ್ಲಿ ಪ್ರೇಮ ನಿವೇದನೆ ಮಾಡಿಕೊಂಡಿದ್ದು ಇದಕ್ಕೆ ಡ್ಯಾನಿ ಸಹ ಯಸ್ ಅಂದಿದ್ದು ನಿಶ್ಚಿತಾರ್ಥದ ರಿಂಗ್ ಜತೆ ಇಬ್ಬರು ಇನ್ ಸ್ಟಾಗ್ರಾಮ್ ನಲ್ಲಿ ಸೆಲ್ಫಿ ಫೋಟೋ ಹಾಕಿದ್ದಾರೆ.
ಪ್ರೇಮಿಗಳಿಗೆ ಪ್ರವಾಸಿ ತಾಣವಾಗಿರುವ ಟಾಪ್ ಆಫ್ ದಿ ರಾಕ್ ನಲ್ಲಿ ಸ್ಮಿತ್ ಡ್ಯಾನಿಗೆ ಪ್ರೇಮ ನಿವೇದನೆ ಮಾಡಿದ್ದರು. ಸ್ಮಿತ್ 2012ರಿಂದ ವಿಲ್ಲಿಸ್ ಜತೆಯಾಗಿ ತಿರುಗಾಡುತ್ತಿದ್ದರು.