2ನೇ ಟೆಸ್ಟ್: 189ಕ್ಕೆ ಭಾರತ ಆಲೌಟ್, ದಿನದಾಂತ್ಯಕ್ಕೆ ಆಸ್ಟ್ರೇಲಿಯಾ 40/0

ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 189 ರನ್ ಗಳಿಸಿ ಆಲೌಟ್ ಆಗಿದ್ದು, ಆಸಿಸ್ ಮೊದಲ....
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್
ಬೆಂಗಳೂರು: ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾ 189 ರನ್ ಗಳಿಸಿ ಆಲೌಟ್ ಆಗಿದ್ದು, ಆಸಿಸ್ ಮೊದಲ ದಿನದಾಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 40 ರನ್ ಗಳಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಭಾರತ ಮೊದಲ ಇನ್ನಿಂಗ್ಸ್ ನಲ್ಲಿ 189 ರನ್ ಗಳಿಗೆ ಸರ್ವಪತನ ಕಂಡಿತು. ಆರಂಭಿಕರಾಗಿ ಬಂದ ಕೆಎಲ್ ರಾಹುಲ್ 90 ರನ್ ಗಳಿಸಿ ಔಟಾಗಿದ್ದು ಟೀಂ ಇಂಡಿಯಾ ಅಲ್ಪಮೊತ್ತಕ್ಕೆ ಕುಸಿಯುವುದರಿಂದ ತಪ್ಪಿಸಿದರು
ಆರಂಭಿಕರಾಗಿ ಬಂದ ಅಭಿನವ್ ಮುಕುಂದ್ ಶೂನ್ಯಕ್ಕೆ ಔಟಾದರು, ಬಳಿಕ ಬಂದ ಚೇತೇಶ್ವರ ಪೂಜಾರ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡಿದರು 17 ರನ್ ಗಳಿಸಿದ್ದಾಗ ನಾಥನ್ ಲ್ಯಾನ್ ಎಸತೆದಲ್ಲಿ ಹ್ಯಾಂಡ್ಸ್ ಕೂಮ್ಬ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು. ನಂತರ ಬಂದ ವಿರಾಟ್ ಕೊಹ್ಲಿ 12 ರನ್ ಗಳಿಸಿ ಔಟಾಗಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದರು. ತಾಳ್ಮೆಯ ಆಟಗಾರ ಅಜಿಂಕ್ಯ ರಹಾನೆ 17, ಕರುಣ್ ನಾಯರ್ 26, ಆರ್ ಅಶ್ವಿನ್ 7, ವೃದ್ಧಿಮಾನ್ ಸಾಹಾ 1, ರವೀಂದ್ರ ಜಡೇಜಾ 3 ರನ್ ಗಳಿಸಿ ಔಟಾಗಿದ್ದಾರೆ. 
ಆಸ್ಟ್ರೇಲಿಯಾ ಪರ ನಾಥನ್ ಲ್ಯಾನ್ 8, ಸ್ಟಾರ್ಕ್ ಓ ಕೇಫೆ ತಲಾ 1 ವಿಕೆಟ್ ಪಡೆದಿದ್ದಾರೆ. 
ಸಂಕ್ಷಿಪ್ತ ಸ್ಕೋರ್
ಭಾರತ ಮೊದಲ ಇನ್ನಿಂಗ್ಸ್: 189ಕ್ಕೆ ಆಲೌಟ್ (71.2 ಓವರ್)
ಕೆ.ಎಲ್.ರಾಹುಲ್ 90, ಅಭಿನವ್ ಮುಕುಂದ್ 0, ಪೂಜಾರ 17, ವಿರಾಟ್ ಕೊಹ್ಲಿ 12, ರೆಹಾನೆ 17, ಕರುಣ್ ನಾಯರ್ 26, ಅಶ್ವಿನ್ 7, ಸಾಹಾ 1, ಜಡೇಜಾ 3 ರನ್, ಇಶಾಂತ್ ಶರ್ಮಾ 0, ಉಮೇಶ್ ಯಾದವ್ 0*; ಆಸ್ಟ್ರೇಲಿಯಾ ಪರ ನಾಥನ್ ಲ್ಯಾನ್ 50ಕ್ಕೆ 8, ಸ್ಟಾರ್ಕ್ 15ಕ್ಕೆ 1, ಒಕಿಫ್ 21ಕ್ಕೆ 1 ವಿಕೆಟ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್: 40/0 (16 ಓವರ್)
ಡೆವಿಡ್ ವಾರ್ನರ್ 23, ಮ್ಯಾಟ್ ರೆನ್​ಶಾ 15

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com