ನವದೆಹಲಿ: ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣ ಟ್ವೀಟರ್ ನಲ್ಲಿ ಸದಾ ಕಾಲ ಒಂದಿಲ್ಲೊಂದು ಕಾರಣಕ್ಕೆ ಸುದ್ದಿ ಮಾಡುತ್ತಿರುತ್ತಾರೆ. ಇದೀಗ ಪಾರ್ಥಿವ್ ಪಟೇಲ್ ಅವರ ಜನ್ಮದಿನಕ್ಕಾಗಿ ಛೋಟಾ ಶಕ್ತಿಮಾನ್ ಫೋಟೋ ಹಾಕಿ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
ಟೀಂ ಇಂಡಿಯಾ ಆಟಗಾರ ಪಾರ್ಥಿವ್ ಪಟೇಲ್ ಅವರ 32ನೇ ವರ್ಷದ ಹುಟ್ಟುಹಬ್ಬಕ್ಕಾಗಿ ಸೆಹ್ವಾಗ್ ಗೆಳೆಯನಿಗೆ ತಮಾಷೆಯಾಗಿ ಶುಭಾಶಯ ಹೇಳಿದ್ದಾರೆ.
ಮೊದಲು ಶಕ್ತಿಮಾನ್ ವೇಷಧಾರಿ ಬಾಲಕನೊಬ್ಬನ ಚಿತ್ರವನ್ನು ಪ್ರಕಟಿಸಿ ಅದರ ಕೆಳಗಡೆ ಛೋಟಾ ಚೇತನ್ ಪಾರ್ಥಿವ್ ಗೆ ಹುಟ್ಟು ಹಬ್ಬದ ಶುಭಾಶಯಗಳು, ಯಾವಾಗಲೂ ಬೆಳಗುತ್ತಲೇ ಇರು. ನೀನು ಟೀಂ ಇಂಡಿಯಾದ 19 ವಯೋಮಿತಿಯೊಳಗಿನ ತಂಡದ ಶಾಶ್ವತ ಆಟಗಾರ ಎಂದು ಕಾಲೆಳೆದಿದ್ದಾರೆ.
Happy Birthday Dear Nikke urf Chota Chetan @parthiv9 . May you keep shining and remain so nanha munna that you can play in u-19 for lifetime pic.twitter.com/hCmsDYGVGr