ಕೊಹ್ಲಿಯನ್ನು ಪ್ರಾಣಿಗಳಿಗೆ ಹೋಲಿಸಿ ವಿವಾದ ಸೃಷ್ಠಿಸಿದ ಆಸೀಸ್ ಮಾಧ್ಯಮ

ಟೀಂ ಇಂಡಿಯಾ ನಾಯಕ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳು ಟೀಕಾ ಪ್ರಹಾರ ನಡೆಸುತ್ತಿದ್ದು ಇದೀಗ ಫಾಕ್ಸ್ ನ್ಯೂಸ್ ಆಸ್ಟ್ರೇಲಿಯಾ ಪತ್ರಿಕೆಯೊಂದು ತನ್ನ ಫೇಸ್ ಬುಕ್...
ವಿರಾಟ್ ಕೊಹ್ಲಿ
ವಿರಾಟ್ ಕೊಹ್ಲಿ
ನವದೆಹಲಿ: ಟೀಂ ಇಂಡಿಯಾ ನಾಯಕ ವಿರುದ್ಧ ಆಸ್ಟ್ರೇಲಿಯಾ ಮಾಧ್ಯಮಗಳು ಟೀಕಾ ಪ್ರಹಾರ ನಡೆಸುತ್ತಿದ್ದು ಇದೀಗ ಫಾಕ್ಸ್ ನ್ಯೂಸ್ ಆಸ್ಟ್ರೇಲಿಯಾ ಪತ್ರಿಕೆಯೊಂದು ತನ್ನ ಫೇಸ್ ಬುಕ್ ಪೇಜ್ ನಲ್ಲಿ ಕೊಹ್ಲಿಯನ್ನು ಪ್ರಾಣಿಗಳ ಜತೆ ಹೋಲಿಸಿದ ಪೋಸ್ಟ್ ಹಾಕಿ ವಿವಾದ ಎಬ್ಬಿಸಿದೆ. 
ಬೆಂಗಳೂರು ಟೆಸ್ಟ್ ನಲ್ಲಿ ಡಿಆರ್ಎಸ್ ವಿವಾದದ ಬಳಿಕ ಆಸೀಸ್ ಮಾಧ್ಯಮಗಳು ಅತಿರೇಕದ ವರ್ತನೆ ತೋರುತ್ತಿವೆ. ಫಾಕ್ಸ್ ನ್ಯೂಸ್ ಕೊಹ್ಲಿಯನ್ನು ಪ್ರಾಣಿಗಳ ಜತೆ ಹೋಲಿಕೆ ಮಾಡಿದ್ದು ಅದರ ಕೆಳಗೆ ಈ ವಾರದ ಖಳನಾಯಕ ಯಾರು? ಅನ್ನುವ ಶೀರ್ಷಿಕೆಯಿರುವ ಈ ಪೋಸ್ಟ್ ನಲ್ಲಿ ಪಾಂಡ, ನಾಯಿಮರಿ ಹಾಗೂ ಬೆಕ್ಕಿನ ಮರಿಯೊಂದಿಗೆ ಕೊಹ್ಲಿ ಚಿತ್ರ ಹಾಕಿ ಅವಹೇಳನ ಮಾಡಲಾಗಿದೆ. 
ಇತ್ತೀಚೆಗಷ್ಟೇ ಇದೇ ಪತ್ರಿಕೆ ಆಸ್ಟ್ರೇಲಿಯಾ ಅಧಿಕಾರಿಗಳ ಮೇಲೆ ಖಾಲಿ ಬಾಟಲಿಗಳನ್ನು ಎಸೆದಿದ್ದಾರೆ ಎಂದು ಕೊಹ್ಲಿ ಮತ್ತು ಕೋಚ್ ಕುಂಬ್ಳೆ ವಿರುದ್ಧ ಕಿಡಿಕಾರಿದ್ದವು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com