ನಾನು ಪಾಕ್ ಸೇನೆ ಸೇರಲು ಬಯಸುತ್ತೇನೆ: ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಮರ್ಲಾನ್ ಸ್ಯಾಮುಯೆಲ್ಸ್

ಇತ್ತೀಚೆಗೆ ಲಾಹೋರ್ ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಭಾಗವಹಿಸಿದ್ದ ವೆಸ್ಟ್ ಇಂಡೀಸ್ ಬ್ಯಾಟ್ಯ್ ಮನ್ ಮರ್ಲಾನ್ ಸ್ಯಾಮುಯೆಲ್ ಪಾಕಿಸ್ತಾನ ಸೇನೆ ಸೇರುವ ...
ಮರ್ಲಾನ್ ಸ್ಯಾಮುಯೆಲ್ಸ್
ಮರ್ಲಾನ್ ಸ್ಯಾಮುಯೆಲ್ಸ್
Updated on

ಕರಾಚಿ: ಇತ್ತೀಚೆಗೆ ಲಾಹೋರ್ ನಲ್ಲಿ ನಡೆದ ಪಾಕಿಸ್ತಾನ ಸೂಪರ್ ಲೀಗ್ ನಲ್ಲಿ ಭಾಗವಹಿಸಿದ್ದ ವೆಸ್ಟ್ ಇಂಡೀಸ್ ಬ್ಯಾಟ್ಯ್ ಮನ್ ಮರ್ಲಾನ್ ಸ್ಯಾಮುಯೆಲ್ ಪಾಕಿಸ್ತಾನ ಸೇನೆ ಸೇರುವ ಇಂಗಿತ ವ್ಯಕ್ತ ಪಡಿಸಿದ್ದಾರೆ.

ಲಾಹೋರ್ ನಲ್ಲಿ ನಡೆದ ಸೂಪರ್ ಲೀಗ್ ವೇಳೆ ಪಾಕ್ ಸರ್ಕಾರ ನೀಡಿದ ಟಾಪ್ ಕ್ಲಾಸ್ ಭದ್ರತೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.ಪಾಕಿಸ್ತಾನ ಸೇನೆ ಮುಖ್ಯಸ್ಥ ಜನರವ್ ಖಮರ್ ಜಾವೇದ್ ಬಜ್ವಾ ಭೇಟಿ ನಂತರ ಈ ಸಂಬಂಧ ಟ್ವೀಟ್ ಮಾಡಿರುವ ಮರ್ಲಾನ್ ಸ್ಯಾಮುಯೆಲ್ಸ್, ಕೇವಲ ಕ್ರಿಕೆಟ್ ಆಡಲು ಪಾಕಿಸ್ತಾನಕ್ಕೆ ಬರಲಿಲ್ಲ, ತಂಡದ ಯಶಸ್ಸು ನೋವಿನಲ್ಲಿರುವ ಜನರ ಮುಖದ ಮೇಲೆ ನಗುವನ್ನು ತರಿಸುವುದಾಗಿದೆ ಎಂದು ಹೇಳಿದ್ದಾರೆ.

ನಾನು ಹೃದಯದಿಂದ ಪಾಕಿಸ್ತಾನಿ, ನಾನು ಏಕೆ ಪಾಕಿಸ್ತಾನದಲ್ಲಿ ದೀರ್ಘ ಸಮಯ ಇರಬಾರದು, ಒಂದು ವೇಳೆ ನನ್ನ ಭುಜದ ಮೇಲೆ ಲೋಹದ ಬ್ಯಾಡ್ಜ್ ಹಾಕಿದರೇ ನನಗೆ ಪಾಕಿಸ್ತಾನಕ್ಕೆ ಬರಲು ಅಭ್ಯಂತರವಿಲ್ಲ, ನಾನು ಪಾಕಿಸ್ತಾನ ಸೇನೆಯ ಒಂದು ಭಾಗವಾಗಬೇಕು. ಮೆಟಲ್ ಬ್ಯಾಡ್ಜ್ ಗಾಗಿ ನಾನು ಕಾಯುತ್ತಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com