ರಾಂಚಿ: ಅತೀ ಹೆಚ್ಚು ಬಾರಿ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಗೆ ಔಟಾಗಲ್ಲ ಎಂದು ಹೇಳಿದ್ದ ಡೇವಿಡ್ ವಾರ್ನರ್ ಮಾತು ಉಳಿಸಿಕೊಂಡಿದ್ದಾರೆ.
ಡೇವಿಡ್ ವಾರ್ನರ್ ಅಶ್ವಿನ್ ಬೇಟೆ ಎಂದು ತಮಾಷೆ ಮಾಡಲಾಗುತ್ತಿತ್ತು. ಇದಕ್ಕೆ ಪ್ರತಿಯಾಗಿ ಇನ್ನುಂದೆ ನಾನು ಅಶ್ವಿನ್ ಗೆ ವಿಕೆಟ್ ಒಪ್ಪಿಸುವುದಿಲ್ಲ ಎಂದು ಹೇಳಿದ್ದ ಡೇವಿಡ್ ವಾರ್ನರ್ ರವೀಂದ್ರ ಜಡೇಜಾಗೆ ಔಟಾಗಿದ್ದಾರೆ.
ಇದಕ್ಕೆ ಟ್ವೀಟರಿಗರು ಯದ್ವಾ ತದ್ವಾ ತಮಾಷೆ ಮಾಡುತ್ತಿದ್ದಾರೆ. ವಾರ್ನರ್ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ ಬಿಡಿ ಎಂದು ಅಭಿಮಾನಿಗಳು ಕಾಲೆಳೆದಿದ್ದಾರೆ. ಅಲ್ಲದೆ ಸ್ಪಿನ್ನರ್ ಗಳನ್ನು ಎದುರಿಸಲು ವಾರ್ನರ್ ತಡಕಾಡುತ್ತಾರೆ ಎಂದು ಗೇಲಿ ಮಾಡಿದ್ದಾರೆ.
ರಾಂಚಿಯಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದಲ್ಲಿ ಡೇವಿಡ್ ವಾರ್ನರ್ ಜಡೇಜಾಗೆ ಸುಲಭ ತುತ್ತಾಗಿದ್ದಾರೆ. ಜಡೇಜಾ ಎಸೆತ ಚೆಂಡನ್ನು ನೇರವಾಗಿ ಜಡೇಜಾರ ಕೈಗೆ ನೀಡಿ ಔಟಾಗಿದ್ದು ತಮಾಷೆಯ ವಿಷಯವಾಗಿದೆ.