ಚಾಂಪಿಯನ್ಸ್ ಟ್ರೋಫಿಗಾಗಿ ಟೀಂ ಇಂಡಿಯಾದ ಒಪ್ಪೊ ನ್ಯೂ ಜೆರ್ಸಿ!

ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಚಾಂಪಿಯನ್ಸ್ ಟ್ರೋಫಿಗಾಗಿ ಬಿಸಿಸಿಐ ಮತ್ತು ಒಪ್ಪೋ ಟೀಂ ಇಂಡಿಯಾದ ನ್ಯೂ ಜೆರ್ಸಿಯನ್ನು...
ಜೆರ್ಸಿ
ಜೆರ್ಸಿ
ಮುಂಬೈ: ಮುಂಬರುವ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ(ಐಸಿಸಿ) ಚಾಂಪಿಯನ್ಸ್ ಟ್ರೋಫಿಗಾಗಿ ಬಿಸಿಸಿಐ ಮತ್ತು ಒಪ್ಪೋ ಟೀಂ ಇಂಡಿಯಾದ ನ್ಯೂ ಜೆರ್ಸಿಯನ್ನು ಅನಾರವಣಗೊಳಿಸಿದೆ. 
ಚೀನಾದ ಮೊಬೈಲ್ ಕಂಪನಿ ಒಪ್ಪೊ ಪ್ರಾಯೋಜಕತ್ವ ಪಡೆದಿರುವ ಜೆರ್ಸಿ ಇದಾಗಿದೆ. ಜೂನ್ 1ರಿಂದ ಇಂಗ್ಲೆಂಡ್ ನಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಸ್ಪರ್ಧಿಸುವ ಬಗ್ಗೆ ಇನ್ನೂ ಗೊಂದಲವಿದ್ದು, ಒಂದೇ ವೇಳೆ ಸ್ಪರ್ಧಿಸುವುದು ಖಚಿತವಾದರೇ ಈ ಜೆರ್ಸಿಯನ್ನು ತೊಡಲಿದೆ. 
ಟೀಂ ಇಂಡಿಯಾದ ಪ್ರಾಯೋಜಕತ್ವಕ್ಕಾಗಿ ಒಪ್ಪೊ ಕಳೆದ ಮಾರ್ಚ್ ನಲ್ಲಿ 5 ವರ್ಷಗಳಿಗೆ 1,079 ಕೋಟಿ ರುಪಾಯಿ ಒಪ್ಪಂದಕ್ಕೆ ಸಹಿ ಹಾಕಿತ್ತು. ವಿವೊ ಹೂಡಿದ್ದ 768 ಕೋಟಿ ರುಪಾಯಿ ಒಪ್ಪಂದ 2ನೇ ಅತ್ಯಧಿಕವಾಗಿತ್ತು. ಸ್ಟಾರ್ ಇಂಡಿಯಾ ಈ ಮುನ್ನ ಹೊಂದಿದ್ದ ಪ್ರಾಯೋಜಕತ್ವ ಒಪ್ಪಂದಕ್ಕಿಂತ 5 ಪಟ್ಟು ಅಧಿಕ ಮೊತ್ತಕ್ಕೆ ಒಪ್ಪೊ ಬಿಡ್ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com