ಐಸಿಸಿ ಹಾಗೂ ಬಿಸಿಸಿಐ ನಡುವಿನ ಹಣಕಾಸು ಹಂಚಿಕೆ ತಿಕ್ಕಾಟದಿಂದಾಗಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಂ ಇಂಡಿಯಾ ಗೈರಾಗಲು ಬಿಸಿಸಿಐ ಪದಾಧಿಕಾರಿಗಳು ನಿರ್ಧರಿಸಿದ್ದರು. ಇದಕ್ಕೆ ಮೊದಲು ಬಿಸಿಸಿಐ ನಿಯೋಜಿತ ಆಡಳಿತಾಧಿಕಾರಿಗಳು ತಕರಾರು ಎತ್ತಿದರು. ಮಾತ್ರವಲ್ಲ ತಕ್ಷಣವೇ ತಂಡ ಪ್ರಕಟಿಸಿ ಎಂದು ತಾಕೀತು ಕೂಡ ಮಾಡಿದ್ದರು.