ಹೈದರಾಬಾದ್ ವಿರುದ್ಧ ಗೆದ್ದ ಕೆಕೆಆರ್ ಕ್ವಾಲಿಫೈಯರ್‌ಗೆ

ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಕೋಲ್ಕತ್ತಾ ನೈಟ್...
ಕೋಲ್ಕತ್ತಾ
ಕೋಲ್ಕತ್ತಾ
Updated on
ಬೆಂಗಳೂರು: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್) 10ನೇ ಆವೃತ್ತಿಯ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಮಣಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಕ್ವಾಲಿಫೈಯರ್ 2ಗೆ ಪ್ರವೇಶ ಪಡೆದಿದೆ. 
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಹೈದರಾಬಾದ್ ತಂಡ 128 ರನ್ ಪೇರಿಸಿತು. ಮಳೆಯಿಂದಾಗಿ 3 ಗಂಟೆಗೂ ಹೆಚ್ಚು ಕಾಲ ಪಂದ್ಯ ರದ್ದುಗೊಂಡಿದ್ದು ನಂತರ 12.55ಕ್ಕೆ ಪಂದ್ಯ ಮತ್ತೆ ಆರಂಭಗೊಂಡಿತು. ಈ ವೇಳೆ ಕೆಕೆಆರ್ 6 ಓವರ್ ಗಳಲ್ಲಿ 48 ರನ್ ಗುರಿ ನೀಡಲಾಯಿತು. ಈ ಮೊತ್ತವನ್ನು ಕೆಕೆಆರ್ ತಂಡ 5.2 ಓವರ್ ಗಳಲ್ಲಿ ತಲುಪಿತು. 
ಕೆಕೆಆರ್ ತಂಡದ ನಾಯಕ ಗೌತಮ್ ಗಂಭೀರ್ ಅಮೋಘ ಆಟ ಪ್ರದರ್ಶಿಸಿ 32 ರನ್ ಗಳಿಸಿದರು. ಇದರೊಂದಿಗೆ ತಂಡಕ್ಕೆ 7 ವಿಕೆಟ್ ಗಳ ಜಯ ತಂದು ಕೊಟ್ಟರು. ಇನ್ನು ಹಾಲಿ ಚಾಂಪಿಯನ್ಸ್ ತಂಡ ಹೈದರಾಬಾದ್ ಐಪಿಎಲ್ ನಿಂದ ಹೊರ ಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com