ಪ್ರಸ್ತುತ ಅನಿಲ್ ಕುಂಬ್ಳೆ ಅವರೇ ಆಟೋಮೆಟಿಕ್ ಆಗಿ ಮುಂದಿನ ಕೋಚ್ ಹುದ್ದೆಯ ಅಭ್ಯರ್ಥಿಯಾಗಿದ್ದಾರೆ. ಇದರಿಂದಾಗಿ ಕುಂಬ್ಳೆ ಜತೆ ಕೋಚ್ ಹುದ್ದೆಗಾಗಿ ಯಾರು ಸ್ಪರ್ಧೆಗೆ ಇಳಿಯಲಿದ್ದಾರೆ ಎನ್ನುವ ಕುತೂಹಲ ಕೆರಳಿಸಿದ್ದು ಅದಕ್ಕೆ ಉತ್ತರ ಸಿಕ್ಕಿದೆ. ಖಾಸಗಿ ಮಾಧ್ಯಮದ ಪ್ರಕಾರ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಸಹ ಕೋಚ್ ಹುದ್ದೆಗಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಲಾಗಿದೆ.