ಕೋಚ್ ಅನಿಲ್ ಕುಂಬ್ಳೆ ಬಗ್ಗೆ ಟೀಂ ಇಂಡಿಯಾ ಆಟಗಾರರಲ್ಲಿ ಅಸಮಾಧಾನ!

ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಬಿಸಿಸಿಐ ಅಧಿಕಾರಿಗಳಿಗೆ ಹಾಲಿ ತರಬೇತುದಾರ ಅನಿಲ್ ಕುಂಬ್ಳೆ ಮೇಲೆ...
ವಿರಾಟ್ ಕೊಹ್ಲಿ-ಅನಿಲ್ ಕುಂಬ್ಳೆ
ವಿರಾಟ್ ಕೊಹ್ಲಿ-ಅನಿಲ್ ಕುಂಬ್ಳೆ
Updated on: 
ನವದೆಹಲಿ: ಚಾಂಪಿಯನ್ಸ್ ಟ್ರೋಫಿಗೂ ಮುನ್ನ ಟೀಂ ಇಂಡಿಯಾದ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದಾಗ ಬಿಸಿಸಿಐ ಅಧಿಕಾರಿಗಳಿಗೆ ಹಾಲಿ ತರಬೇತುದಾರ ಅನಿಲ್ ಕುಂಬ್ಳೆ ಮೇಲೆ ಅಸಮಾಧಾನವಿದೆ ಎಂಬುದು ಸ್ಪಷ್ಟವಾಗಿತ್ತು ಇದೀಗ ಭಾರತ ತಂಡದ ಆಟಗಾರರಿಗೂ ಕುಂಬ್ಳೆ ಮೇಲೆ ಅಸಮಾಧಾನವಿರುವುದು ಬೆಳಕಿಗೆ ಬಂದಿದೆ. 
ಕೋಚ್ ಅನಿಲ್ ಕುಂಬ್ಳೆ ದರ್ಪ, ಸ್ನೇಹಪರವಿಲ್ಲದ ವರ್ತನೆಯನ್ನು ತೋರುತ್ತಿದ್ದಾರೆ ಎಂದು ಆಟಗಾರರು ಬಿಸಿಸಿಐ ಆಡಳಿತಾಧಿಕಾರಿಗಳ ಸಮಿತಿಗೂ(ಸಿಒಎ) ಈಗಾಗಲೇ ದೂರು ನೀಡಿದ್ದಾರೆ ಎಂದು ವರದಿಯಾಗಿದೆ. 
ಅನಿಲ್ ಕುಂಬ್ಳೆ ಡ್ರೆಸ್ಸಿಂಗ್ ರೂಂನಲ್ಲಿ ಆಟಗಾರರಿಗೆ ಯಾವುದೇ ಸ್ವಾತಂತ್ರ್ಯ ನೀಡುತ್ತಿಲ್ಲ ಮತ್ತು ಉಸಿರುಕಟ್ಟಿಸುವಂಥ ವಾತಾವರಣ ಸೃಷ್ಟಿಸಿದ್ದಾರೆ. ಆಟಗಾರರೊಂದಿಗೆ ಸ್ನೇಹಪೂರ್ವಕ ಸಂಬಂಧ ಇಟ್ಟುಕೊಳ್ಳುವುದಿಲ್ಲ ಎಂಬ ದೂರುಗಳಿವೆ. 
ಚಾಂಪಿಯನ್ಸ್ ಟ್ರೋಫಿಯಲ್ಲಿ ಜೂನ್ 4ರಂದು ಪಾಕಿಸ್ತಾನ ವಿರುದ್ಧ ಆಡುವ ಮೂಲಕ ಭಾರತ ತಂಡ ಅಭಿಯಾನ ಆರಂಭಿಸಲು ಸಜ್ಜಾಗಿರುವ ನಡುವೆ ಈ ವರದಿ ಕಳವಳ ಸೃಷ್ಟಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com