ಮುಂಬೈ: ಚೈನಾಮ್ಯಾನ್ ಖ್ಯಾತಿಯ ಕುಲ್‌ದೀಪ್ ಯಾದವ್ ಟೀಂ ಇಂಡಿಯಾದ ಮಾಜಿ ಕೋಚ್ ಅನಿಲ್ ಕುಂಬ್ಳೆ ಅವರ ಉತ್ಪನ್ನ ಎಂದು ಟೀಂ ಇಂಡಿಯಾದ ಸ್ಫೋಟಕ ಬ್ಯಾಟ್ಸ್ ಮನ್ ಸುರೇಶ್ ರೈನಾ ಹೇಳಿದ್ದಾರೆ.
ಕುಲ್‌ದೀಪ್ ವಿಕೆಟ್ ಗಳನ್ನು ಪಡೆಯುವ ಮೂಲಕ ಟೀಂ ಇಂಡಿಯಾದ ಸ್ಟಾರ್ ಬೌಲರ್ ಆಗಿ ಹೊರ ಹೊಮ್ಮಿದ್ದಾರೆ. ಇದಕ್ಕೆಲ್ಲಾ ಮೂಲಕ ಕಾರಣ ಅನಿಲ್ ಕುಂಬ್ಳೆ ಅವರ ಪರಿಶ್ರಮ. ಹೀಗಾಗಿ ಇಂದು ಕುಲ್‌ದೀಪ್ ಏನೇ ಸಾಧನೆ ಮಾಡಿದರು ಅದರ ಯಶಸ್ಸು ಕುಂಬ್ಳೆ ಅವರಿಗೆ ಸಲ್ಲಬೇಕು ಎಂದರು.
ಐಪಿಎಲ್ ನಲ್ಲಿ ನಾನು ಕುಲ್‌ದೀಪ್ ಜತೆ ಮಾತನಾಡಿದ್ದೇ ಆಗ ಕುಲ್‌ದೀಪ್ ಅನಿಲ್ ಕುಂಬ್ಳೆ ಅವರಿಂದ ಟಿಪ್ಸ್ ಗಳನ್ನು ಪಡೆಯುವುದಾಗಿ ಹೇಳುತ್ತಿದ್ದರು. ಇನ್ನು ಮಾಜಿ ಆಸ್ಟ್ರೇಲಿಯಾ ಕ್ರಿಕೆಟಿಗ ಬ್ರಾಡ್ ಹಾಗ್ ರಿಂದಲೂ ಕುಲದೀಪ್ ತಮ್ಮ ಬೌಲಿಂಗ್ ಸಾಮರ್ಥ್ಯವನ್ನು ವೃದ್ಧಿಸಿಕೊಂಡಿದ್ದಾರೆ ಎಂದರು.
22 ವರ್ಷದ ಕುಲ್‌ದೀಪ್ ಯಾದವ್ ಕಾನ್ಪುರದಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್ ಸಾಧನೆ ಮಾಡಿದರು. ಭಾರತೀಯ ಕ್ರಿಕೆಟ್ ನಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೂರನೇ ಆಟಗಾರ ಎಂಬ ಖ್ಯಾತಿಗೂ ಕುಲ್‌ದೀಪ್ ಭಾಜನರಾಗಿದ್ದಾರೆ ಎಂದು ರೈನಾ ಹೇಳಿದರು.