ಏಕದಿನ, ಟಿ20 ಸರಣಿ: ಭಾರತಕ್ಕೆ ನ್ಯೂಜಿಲೆಂಡ್ ತಂಡ ಆಗಮನ

ನ್ಯೂಜಿಲೆಂಡ್ ತಂಡದ ಪ್ರಮುಖ 9 ಆಟಗಾರರ ತಂಡ ಶುಕ್ರವಾರ ಭಾರತಕ್ಕೆ ಆಗಮಿಸಿದೆ...
ನ್ಯೂಜಿಲೆಂಡ್ ಆಟಗಾರರು
ನ್ಯೂಜಿಲೆಂಡ್ ಆಟಗಾರರು
Updated on: 
ಮುಂಬೈ: ನ್ಯೂಜಿಲೆಂಡ್ ತಂಡದ ಪ್ರಮುಖ 9 ಆಟಗಾರರ ತಂಡ ಶುಕ್ರವಾರ ಭಾರತಕ್ಕೆ ಆಗಮಿಸಿದೆ. 
ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ನಡುವೆ ಅಕ್ಟೋಬರ್ 22ರಿಂದ ಸೀಮಿತ ಓವರ್ ಗಳ ಸರಣಿ ನಡೆಯಲಿದೆ. 
ನ್ಯೂಜಿಲೆಂಡ್ ಅನುಭವಿ ಬ್ಯಾಟ್ಸ್ ಮನ್ ರಾಸ್ ಟೇಲರ್ ಮತ್ತೆ ಭಾರತ ಪ್ರವಾಸಕ್ಕೆ ಆಗಮಿಸಿರುವ ಬಗ್ಗೆ ಟ್ವೀಟರ್ ನಲ್ಲಿ ಸಂಭ್ರಮ ಹಂಚಿಕೊಂಡಿದ್ದಾರೆ.
ತಂಡದ ಇತರ 6 ಆಟಗಾರರು ಸದ್ಯ ಭಾರತದಲ್ಲೇ ಇರುವ ನ್ಯೂಜಿಲೆಂಡ್ ಎ ತಂಡದಿಂದ ಆಯ್ಕೆಯಾಗಲಿದ್ದಾರೆ. 
ನ್ಯೂಜಿಲೆಂಡ್ ಹಾಗೂ ಭಾರತ ನಡುವೆ ಮೂರು ಏಕದಿನ ಪಂದ್ಯಗಳು ನಡೆಯಲಿದ್ದು ಅಕ್ಟೋಬರ್ 22ರಂದು ಮೊದಲ ಏಕದಿನ ಪಂದ್ಯ ಮುಂಬೈನಲ್ಲಿ ನಡೆಯಲಿದೆ. ಅಕ್ಟೋಬರ್ 25 ಪುಣೆ, 29ರಂದು ಕಾನ್ಪುರದಲ್ಲಿ ಇಳಿದೆರೆಡು ಏಕದಿನ ಪಂದ್ಯಗಳು ನಡೆಯಲಿವೆ. ನಂತರ ಮೂರು ಟಿ20 ಪಂದ್ಯಗಳ ಸರಣಿ ನಡೆಯಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com