ಪ್ರಾಯೋಗಿಕವಾಗಿ ನಡೆಯಲಿರುವ ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಜಿಂಬಾಬ್ವೆ ನಡುವೆ ಪಂದ್ಯ ನಡೆಸಲಿದೆ. ಇತರ ಮಂಡಳಿಗೂ ನಾಲ್ಕು ದಿನದ ಟೆಸ್ಟ್ ಪಂದ್ಯಕ್ಕೆ ಹೊಂದಿಕೊಳ್ಳಲು ಮುಂದಾಗುತ್ತಿವೆ. ಆದರೆ ಐಸಿಸಿ ಕ್ರಿಕೆಟ್ ಕಮಿಟಿಯ ಮುಖ್ಯಸ್ಥ ಅನಿಲ್ ಕುಂಬ್ಳೆ ಅವರ ನಾಲ್ಕು ದಿನಗಳ ಟೆಸ್ಟ್ ಕ್ರಿಕೆಟ್ ಶಿಫಾರಸ್ಸಿಗೆ ಸೆಡ್ಡು ಹೊಡೆಯಲು ಮುಂದಾಗಿರುವ ಬಿಸಿಸಿಐ ಮಾತ್ರ ಹಳೆಯ ಐದು ದಿನಗಳ ಸಂಪ್ರದಾಯಕ್ಕೆ ಹೊಂದಿಕೊಳ್ಳಲಿದೆ.