ಕೊಹ್ಲಿ ಹೆಸರನ್ನು ತಪ್ಪಾಗಿ ಬರೆದು ಟೀಕೆಗೆ ಗುರಿಯಾದ ಇಂಗ್ಲೆಂಡ್ ತಂಡದ ನಾಯಕಿ

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ತಪ್ಪಾಗಿ ಬರೆದು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನಿಯಲ್...
ಡೇನಿಯಲ್ ವ್ಯಾಟ್-ವಿರಾಟ್ ಕೊಹ್ಲಿ
ಡೇನಿಯಲ್ ವ್ಯಾಟ್-ವಿರಾಟ್ ಕೊಹ್ಲಿ
ನವದೆಹಲಿ: ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಹೆಸರನ್ನು ತಪ್ಪಾಗಿ ಬರೆದು ಟ್ವೀಟರ್ ನಲ್ಲಿ ಪೋಸ್ಟ್ ಮಾಡಿದ್ದ ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಡೇನಿಯಲ್ ವ್ಯಾಟ್ ಟ್ವೀಟರಿಗರ ಟೀಕೆಗೆ ಗುರಿಯಾಗಿದ್ದಾರೆ. 
2014ರ ಟಿ20 ವಿಶ್ವಕಪ್ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯಿಂದ ಉಡುಗೊರೆಯಾಗಿ ಪಡೆದಿದ್ದ ಬ್ಯಾಟ್ ನ ತುದಿಯಲ್ಲಿ ವಿರಾಟ್ ಕೊಹ್ಲಿ ಹೆಸರನ್ನು ತಪ್ಪಾಗಿ ಬರೆದಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ್ದಾರೆ. 
ಇನ್ನು ಬ್ಯಾಟ್ ನ ತುದಿಯಲ್ಲಿ ವಿರಾಟ್ ಕೊಹ್ಲಿ ಎಂದು ಅಭಿಮಾನದಿಂದ ಬರೆದುಕೊಂಡಿರುವ ಡೇನಿಯಲ್ ವ್ಯಾಟ್ ಫೋಟೋದ ಕೆಳಗೆ ಈ ಬ್ಯಾಟ್ ನಲ್ಲಿ ಅಭ್ಯಾಸ ನಡೆಸಲು ಉತ್ಸುಕಳಾಗಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com