ನೀಲಿ ಚಿತ್ರ ನಟಿ ವ್ಯಾಲೆರಿ ಮೇಲೆ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಹಲ್ಲೆ!

ಖ್ಯಾತ ಲೆಗ್ ಸ್ಪಿನ್ನರ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ...
ವ್ಯಾಲೆರಿ-ಶೇನ್ ವಾರ್ನ್
ವ್ಯಾಲೆರಿ-ಶೇನ್ ವಾರ್ನ್
Updated on
ಲಂಡನ್: ಖ್ಯಾತ ಲೆಗ್ ಸ್ಪಿನ್ನರ್, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಶೇನ್ ವಾರ್ನ್ ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದ್ದಾರೆ. 
ಲಂಡನ್ ನ ಜನಪ್ರಿಯ ಲೊಲೊ ಬಾರ್ ನಲ್ಲಿ ನೀಲಿ ಚಿತ್ರ ನಟಿ ವ್ಯಾಲೆರಿ ಫಾಕ್ಸ್ ಮೇಲೆ ಹಲ್ಲೆ ಮಾಡಿದ ಆರೋಪಕ್ಕೆ ಶೇನ್ ವಾರ್ನ್ ಗುರಿಯಾಗಿದ್ದಾರೆ. ಇನ್ನು ಪ್ರತ್ಯಕ್ಷದರ್ಶಿಗಳು ಹಾಗೂ ಸ್ವತಃ ವ್ಯಾಲೆರಿ ಶೇನ್ ವಾರ್ನ್ ವಿರುದ್ಧ ಹೇಳಿಕೆಗಳನ್ನು ನೀಡಿದ್ದಾರೆ. 
ಟ್ವೀಟರ್ ನಲ್ಲಿ ತನಗೆ ಪೆಟ್ಟು ಬಿದ್ದಿರುವ ಚಿತ್ರ ಸಹಿತ ಘಟನೆಯ ಬಗ್ಗೆ ವಿವರಿಸಿರುವ ವ್ಯಾಲೆರಿ ನಾನು ಸುಳ್ಳು ಹೇಳುತ್ತಿಲ್ಲ. ನೀವು ಜನಪ್ರಿಯ ವ್ಯಕ್ತಿ ಎನ್ನುವ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಬರೆದಿದ್ದಾಳೆ.
ಹಲ್ಲೆಗೆ ಸಂಬಂಧಿಸಿದಂತೆ ವ್ಯಾಲೆರಿ ಪೊಲೀಸರಿಗೆ ದೂರು ನೀಡಿದ್ದಾಳೆ. ಇನ್ನು ಈ ಘಟನೆಗೆ ಕುರಿತಂತೆ ಪ್ರತಿಕ್ರಿಯಿಸಿರುವ ಶೇನ್ ವಾರ್ನ್ ಪತ್ರಿಕೆಗಳಲ್ಲಿ ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಿರುವ ಸುದ್ದಿ ನೋಡಿ ನಾನು ಆಘಾತಕ್ಕೊಳಗಿದ್ದೇನೆ. ಈ ಸಂಬಂಧ ಪೊಲೀಸರಿಗೆ ಅಗತ್ಯವಾಗಿ ಸಹಕರಿಸುತ್ತೇನೆ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com