ತಿಂಗಳ ಖರ್ಚಿಗೆ 10 ಲಕ್ಷ ಪರಿಹಾರ ಕೇಳಿದ ಮೊಹಮ್ಮದ್ ಶಮಿ ಪತ್ನಿ

ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅಕ್ರಮ ಸಂಬಂಧ, ದೈಹಿಕ ಹಲ್ಲೆ, ಲೈಂಗಿಕ ಕಿರುಕುಳ ಆರೋಪ ಮಾಡಿರುವ ಪತ್ನಿ ಹಸೀನ್ ಜಹಾನ್ ಇದೀಗ ಮಧ್ಯಾವಧಿ...
ಮೊಹಮ್ಮದ್ ಶಮಿ-ಹಸೀನ್ ಜಹಾನ್
ಮೊಹಮ್ಮದ್ ಶಮಿ-ಹಸೀನ್ ಜಹಾನ್
ನವದೆಹಲಿ: ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಅಕ್ರಮ ಸಂಬಂಧ, ದೈಹಿಕ ಹಲ್ಲೆ, ಲೈಂಗಿಕ ಕಿರುಕುಳ ಆರೋಪ ಮಾಡಿರುವ ಪತ್ನಿ ಹಸೀನ್ ಜಹಾನ್ ಇದೀಗ ಮಧ್ಯಾವಧಿ ಪರಿಹಾರವಾಗಿ ತನಗೆ ತಿಂಗಳ 10 ಲಕ್ಷ ರು. ಮಾಸಿಕ ಪರಿಹಾರವನ್ನು ನ್ಯಾಯಾಲಯದಲ್ಲಿ ಆಗ್ರಹಿಸಿದ್ದಾರೆ. 
ನನಗೆ ತಿಂಗಳಿಗೆ 7 ಲಕ್ಷ ರು. ಹಾಗೂ ನನ್ನ ಮಗುವಿಗೆ ತಿಂಗಳಿಗೆ 3 ಲಕ್ಷ ರು. ಸೇರಿದಂತೆ 10 ಲಕ್ಷ ರುಪಾಯಿ ಮಾಸಿಕ ಪರಿಹಾರ ನೀಡುವಂತೆ ನ್ಯಾಯಾಲಯದಲ್ಲಿ ಕೇಳಿದ್ದಾರೆ. 
ಇದೇ ವೇಳೆ ಹಸೀನ್ ಜಹಾನ್ ನ್ಯಾಯಾಲಯದಲ್ಲಿ ಮೊಹಮ್ಮದ್ ಶಮಿ, ಆತನ ತಾಯಿ, ಹಿರಿಯ ಸೋದರ, ಸೋದರಿ, ಮತ್ತು ನಾದಿನಿಯ ವಿರುದ್ಧ ಕೌಟುಂಬಿಕ ಹಿಂಸೆಯ ಕೇಸ್ ಅನ್ನು ದಾಖಲಿಸಿದ್ದಾರೆ. 
ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಪತ್ನಿ ಹಸೀನ್ ಜಹಾನ್ ಕೌಟುಂಬಿಕ ದೌರ್ಜನ್ಯ, ವಿವಾಹೇತರ ಸಂಬಂಧ ಮತ್ತು ಭ್ರಷ್ಟಾಚಾರ ಆರೋಪ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com