ಐಪಿಎಲ್: ರಾಹುಲ್​, ಗೇಲ್​ ಅಬ್ಬರದಾಟ, ಕಿಂಗ್ಸ್​ ಇಲೆವೆನ್​ ​ಗೆ 9 ವಿಕೆಟ್ ಗಳ ಭರ್ಜರಿ ಜಯ

ಹೊಡಿಬಡಿ ದಾಂಡಿಗ ಕ್ರಿಸ್​ ಗೇಲ್​ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ...
ಕ್ರಿಸ್ ಗೇಲ್, ಕೆಎಲ್ ರಾಹುಲ್
ಕ್ರಿಸ್ ಗೇಲ್, ಕೆಎಲ್ ರಾಹುಲ್
Updated on
ಕೋಲ್ಕತಾ: ಹೊಡಿಬಡಿ ದಾಂಡಿಗ ಕ್ರಿಸ್​ ಗೇಲ್​ ಹಾಗೂ ಕನ್ನಡಿಗ ಕೆ ಎಲ್​ ರಾಹುಲ್​ ಅವರ ಆಕರ್ಷಕ ಅರ್ಧ ಶತಕಗಳ ನೆರವಿನಿಂದ ಕಿಂಗ್ಸ್​ ಇಲೆವೆನ್​ ಪಂಜಾಬ್​,  ಕೋಲ್ಕತ ನೈಟ್​ ರೈಡರ್ಸ್​ ವಿರುದ್ಧ 9 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತಾ ನೈಟ್ ರೈಡರ್ಸ್ ತಂಡ, ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ ನಷ್ಟಕ್ಕೆ 191 ರನ್​ ಗಳಿಸಿತು. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಡಕ್ವರ್ಥ್​ ಲೂಯಿಸ್​ ನಿಯಮದ ಪ್ರಕಾರ ಪಂಜಾಬ್​ ತಂಡಕ್ಕೆ 13 ಓವರ್​ಗಳಲ್ಲಿ 125 ಓವರ್​ ಗಳಿಸುವ ಗುರಿ ನಿಗದಿಪಡಿಸಲಾಗಿತ್ತು.
125 ರನ್ ಗಳ ಗುರಿ ಬೆನ್ನತ್ತಿದ ಪಂಜಾಬ್ ತಂಡ, ಆರಂಭಿಕ ಆಟಗಾರ ಕೆ.ಎಲ್ ರಾಹುಲ್(60) ಮತ್ತು ಕ್ರಿಸ್ ಗೇಲ್(62) ಅರ್ಧ ಶತಕಗಳ ನೆರವಿನಿಂದ ಇನ್ನು 11 ಎಸೆತಗಳು ಬಾಕಿ ಇರುವಂತೆಯೇ ಗೆಲುವು ದಾಖಲಿಸಿತು.
ಕೋಲ್ಕತಾ ಪರ ಕ್ರಿಸ್​ ಲ್ಯಾನ್​ (74) ಆಕರ್ಷಕ ಅರ್ಧ ಶತಕ ಗಳಿಸಿದರೆ, ನಾಯಕ ದಿನೇಶ್​ ಕಾರ್ತಿಕ್​ (43) ಮತ್ತು ರಾಬಿನ್​ ಉತ್ತಪ್ಪ (34) ರನ್​ ಗಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com