ಸೈಕಲ್‌ನಲ್ಲಿ ರಜನಿ ರೀತಿ ಭರ್ಜರಿ ಸ್ಟಂಟ್ ಮಾಡಿದ ಎಂಎಸ್ ಧೋನಿ, ವಿಡಿಯೋ ವೈರಲ್!

ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯನ್ನು ತಮಿಳಿಗರು ತಲೈವಾ ಎಂದೇ ಕರೆಯುತ್ತಾರೆ...
ಎಂಎಸ್ ಧೋನಿ
ಎಂಎಸ್ ಧೋನಿ
ರಾಂಚಿ: ಟೀಂ ಇಂಡಿಯಾದ ಮಾಜಿ ನಾಯಕ, ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಎಂಎಸ್ ಧೋನಿಯನ್ನು ತಮಿಳಿಗರು ತಲೈವಾ ಎಂದೇ ಕರೆಯುತ್ತಾರೆ. ಇದೀಗ ಇದೇ ಎಂಎಸ್ ಧೋನಿ ದಕ್ಷಿಣ ಭಾರತ ಸೂಪರ್ ಸ್ಟಾರ್ ರಜನಿಕಾಂತ್ ರೀತಿಯಲ್ಲೇ ಸ್ಟೈಲ್ ಮಾಡಿ ಎಲ್ಲ ಗಮನ ಸೆಳೆದಿದ್ದಾರೆ. 
ಟೆಸ್ಟ್ ಕ್ರಿಕೆಟ್ ಗೆ ವಿದಾಯ ಹೇಳಿದ್ದರಿಂದ ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿ ಬಳಿಕ ತವರಿಗೆ ವಾಪಸ್ಸಾಗಿರುವ ಎಂಎಸ್ ಧೋನಿ ವಿಶ್ರಾಂತಿಯಲ್ಲಿದ್ದಾರೆ. ಇದೇ ವೇಳೆ ಧೋನಿ ತಮ್ಮ ಮನೆಯ ಮುಂಭಾಗದಲ್ಲಿ ಸೈಕಲ್ ಏರಿ ಸ್ಟಂಟ್ ಮಾಡಿದ್ದಾರೆ. 
ಸೈಕಲ್ ಏರಿದ ಧೋನಿ ರಜನಿ ಸ್ಟೈಲ್ ನಂತೆ ಕೂಲಿಂಗ್ ಗ್ಲಾಸ್ ಹಾಕಿದ್ದಾರೆ. ಇಷ್ಟೇ ಅಲ್ಲ ಕಿವಿಗೆ ಹೆಡ್ ಫೋನ್, ಜೊತೆಗೆ ಬಾಯಲ್ಲಿ ಕೋಲು ಕಚ್ಚಿ ಸವಾರಿ ಮಾಡಿದ್ದಾರೆ. ಅದು ಕೂಡ ಮಳೆಯಲ್ಲಿ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ ಲೋಡ್ ಮಾಡಿರುವ ಧೋನಿ, ತಮಾಷೆಗಾಗಿ ನೀವು ಮನೆಯಲ್ಲಿ ಪ್ರಯತ್ನಿಸಿ ಎಂದು ಬರೆದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com