ಕಳಪೆ ಪ್ರದರ್ಶನದ ಮೂಲಕ ಭಾರತದ ಮಾನ ಕಳೆಯುತ್ತಿರುವ ಮುರಳಿ, ಕೆಎಲ್ ರಾಹುಲ್, ಪೂಜಾರ!

ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದ್ದು ಇದೀಗ ಎರಡನೇ ಪಂದ್ಯದಲ್ಲಿ ಭಾರತದ...
ಮುರಳಿ ವಿಜಯ್-ಕೆಎಲ್ ರಾಹುಲ್-ಚೇತೇಶ್ವರ ಪೂಜಾರ
ಮುರಳಿ ವಿಜಯ್-ಕೆಎಲ್ ರಾಹುಲ್-ಚೇತೇಶ್ವರ ಪೂಜಾರ
ಲಂಡನ್: ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯವನ್ನು ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದ್ದು ಇದೀಗ ಎರಡನೇ ಪಂದ್ಯದಲ್ಲಿ ಭಾರತದ ಸ್ಯಾರ್ ಆಟಗಾರರೂ ಕಳಪೆ ಪ್ರದರ್ಶನ ನೀಡಿದ್ದು ಮೊದಲ ಇನ್ನಿಂಗ್ಸ್ ನಲ್ಲಿ ಭಾರತ 107 ರನ್ ಪೇರಿಸಿ ಅಲ್ಪಮೊತ್ತಕ್ಕೆ ಆಲೌಟ್ ಆಗಿದೆ. 
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಎರಡನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಟಾಸ್ ಸೋಲು ಭಾರತ ಮೊದಲು ಬ್ಯಾಟಿಂಗ್ ಆರಂಭಿಸಿತು. ಆರಂಭಿಕರಾಗಿ ಕಣಕ್ಕಿಳಿದ ಮುರಳಿ ವಿಜಯ್ ಹಾಗೂ ಕೆಎಲ್ ರಾಹುಲ್ ಹಾಗೇ ಬಂದು ಹಾಗೇ ಪೆವಿಲಿಯನ್ ಸೇರಿದರು. ಉತ್ತಮ ಆರಂಭ ಒದಗಿಸಬೇಕಿದ್ದ ಮುರಳಿ ವಿಜಯ್ ಡಕೌಟ್ ಆದರು. ನಂತರ ಕೆಎಲ್ ರಾಹುಲ್ ಗೆ ಜೊತೆಯಾದ ಚೇತೇಶ್ವರ ಪೂಜಾರ 1 ರನ್ ಗಳಿಸಿದ್ದಾಗ ರನ್ ಔಟ್ ಆಗಿ ಪೆಲಿವಿಲಿಯನ್ ಸೇರಿದರು. 
ಎಂತಹ ಪರಿಸ್ಥಿತಿಯಲ್ಲೂ ಅರ್ಧ ಶತಕ ಸಿಡಿಸುವ ಸಾಮರ್ಥ್ಯವೊಂದಿದ್ದ ಕೆಎಲ್ ರಾಹುಲ್ 8 ರನ್ ಬಾರಿಸಿ ಪೆಲಿವಿಯನ್ ಸೇರಿದರು. ಇದರೊಂದಿಗೆ ಭಾರತ 15 ರನ್ ಗಳಿಗೆ ಪ್ರಮುಖ ಮೂರು ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಈ ವೇಳೆ ವಿರಾಟ್ ಕೊಹ್ಲಿ ಉತ್ತಮ ರನ್ ಪೇರಿಸುವ ಸೂಚನೆ ನೀಡಿದರು. ಆದರೆ 23 ರನ್ ಗಳಿಸಿದ್ದಾಗ ವೋಕ್ಸ್ ಎಸೆತದಲ್ಲಿ ಬಟ್ಲರ್ ಗೆ ಕ್ಯಾಚ್ ನೀಡಿ ನಿರ್ಗಮಿಸಿದರು.  ನಂತರ ಬಂದ ಆರ್ ಅಶ್ವಿನ್ 29 ರನ್ ಗಳಿಸಿದ್ದು ಬಿಟ್ಟರೆ ಮತ್ಯಾಯ ಆಟಗಾರನು ಹೆಚ್ಚು ಸಮಯ ಕ್ರೀಸ್ ನಲ್ಲಿ ನಿಲ್ಲಲಿಲ್ಲ. 
ಒಂದು ರೀತಿಯಲ್ಲಿ ಇಂಗ್ಲೆಂಡ್ ವೇಗಿಗಳಿಗೆ ಬೆದರಿದ ಟೀಂ ಇಂಡಿಯಾ ಬ್ಯಾಟ್ಸ್ ಮನ್ ಗಳು ವಿಕೆಟ್ ಒಪ್ಪಿಸಿ ಪೆವಿಲಿಯನ್ ಪರೇಡೆ ನಡೆಸಿದರು. ಮೊದಲ ಪಂದ್ಯದ ಸೋಲು. ಇದೀಗ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಕಳಪೆ ಪ್ರದರ್ಶನ ನೋಡುತ್ತಿದ್ದರೆ ಭಾರತ ಪಂದ್ಯವನ್ನು ಗೆಲ್ಲುವ ಕನಸು ಬಿಟ್ಟು ಸದ್ಯ ಉತ್ತಮ ರನ್ ಪೇರಿಸುವ ಮೂಲಕ ಮಾನ ಉಳಿಸಿಕೊಂಡರೆ ಸಾಕು ಎಂದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com