ಲಂಡನ್: ಭಾರತ - ಇಂಗ್ಲೆಂಡ್ ನಡುವಿನ ನಾಲ್ಕನೇ ಟೆಸ್ಟ್ ಪಂದ್ಯ ಸೌತಾಂಪ್ಟನ್ ನಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡುತ್ತಿದೆ.
ಇನ್ನು ಟೀಂ ಇಂಡಿಯಾದಲ್ಲಿ ಯಾವುದೇ ಬದಲಾವಣೆ ಮಾಡದಿರುವುದರಿಂದ ಚೊಚ್ಚಲ ಬುಲಾವ್ ಪಡೆದಿರುವ ಪೃಥ್ವಿ ಶಾ ತಮ್ಮ ಅವಕಾಶಕ್ಕಾಗಿ ಮತ್ತಷ್ಟು ಕಾಯಬೇಕಿದೆ. ಹಾಗೆಯೇ ಸಂಪೂರ್ಣ ಫಿಟ್ನೆಸ್ ಮರಳಿ ಪಡೆದಿರುವ ಆರ್ ಅಶ್ವಿನ್ ಸೇವೆಗೆ ಲಭ್ಯವಾಗಿದ್ದಾರೆ.
ಆಂಗ್ಲರ ವಿರುದ್ಧದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮೊದಲೆರೆಡು ಪಂದ್ಯಗಳಲ್ಲಿ ಸೋಲು ಅನುಭವಿಸಿರುವ ಭಾರತ, ಮೂರನೇ ಟೆಸ್ಟ್ ನಲ್ಲಿ ಗೆಲುವು ಸಾಧಿಸುವ ಮೂಲಕ ಕಮ್‌ಬ್ಯಾಕ್ ಮಾಡಿದೆ.
ಸರಣಿ ಗೆಲ್ಲಲು ಭಾರತದ ಪಾಲಿಗೆ ನಾಲ್ಕು ಮತ್ತು ಐದನೇ ಟೆಸ್ಟ್ ಪಂದ್ಯಗಳು ನಿರ್ಣಾಯಕವಾಗಿದ್ದು, ಮಾಡು ಇಲ್ಲವೇ ಮಡಿ ಎಂಬಂತಾಗಿದೆ.
ಆತಿಥೇಯ ಇಂಗ್ಲೆಂಡ್ ತಂಡದಲ್ಲಿ ಪ್ರಮುಖವಾಗಿಯೂ ಎರಡು ಬದಲಾವಣೆಗಳನ್ನು ತರಲಾಗಿದ್ದು, ಸ್ಯಾಮ್ ಕರ್ರನ್ ಹಾಗೂ ಮೊಯಿನ್ ಆಲಿ ಕಮ್‌ಬ್ಯಾಕ್ ಮಾಡಿಕೊಂಡಿದ್ದಾರೆ. ಇವರಿಗಾಗಿ ಒಲಿವರ್ ಪಾಪ್ ಹಾಗೂ ಕ್ರಿಸ್ ವೋಕ್ಸ್ ತಮ್ಮ ತಮ್ಮ ಸ್ಥಾನಗಳನ್ನು ಬಿಟ್ಟುಕೊಟ್ಟಿದ್ದಾರೆ.