ಪರ್ತ್ ನಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮುಕ್ತಾಯದ ಬಳಿಕ ಫಾಕ್ಸ್ ಸ್ಪೋರ್ಟ್ಸ್ ನಲ್ಲಿ ಅಂಕಣವೊಂದರಲ್ಲಿ ಈ ಬಗ್ಗೆ ಬರೆದಿರುವ ಜಾನ್ಸನ್, ಆನ್ ಫೀಲ್ಡ್ ನಲ್ಲಿ ಕೊಹ್ಲಿ ವರ್ತನೆ ತುಂಬಾ ಕ್ಷುಲ್ಲಕವಾಗಿರುತ್ತದೆ. ಅಲ್ಲದೆ ಅಗೌರವದಿಂದ ಕೂಡಿರುತ್ತದೆ. ಇದಕ್ಕೆ ಪರ್ತ್ ಟೆಸ್ಟ್ ಪಂದ್ಯ ಕೂಡ ಹೊರತಾಗಿಲ್ಲ. ಸಾಮಾನ್ಯವಾಗಿ ಎಲ್ಲ ಆಟಗಾರರೂ ಪಂದ್ಯ ಮುಕ್ತಾಯದ ಬಳಿಕ ಒಬ್ಬರೊನ್ನಬ್ಬರು ಅಭಿನಂಧಿಸಿಕೊಳ್ಳುತ್ತೇವೆ. ಅಂತೆಯೇ ಪರ್ತ್ ಟೆಸ್ಟ್ ಪಂದ್ಯದ ಬಳಿಕ ಆಸಿಸ್ ನಾಯಕ ಪೈನ್ ಮತ್ತು ಕೊಹ್ಲಿ ಹಸ್ತಲಾಘವ ಮಾಡಿದರು. ಆದರೆ ಕೊಹ್ಲಿ ಪೈನೆ ಅವರನ್ನು ನೋಡಿ ಹಸ್ತಲಾಘವ ಮಾಡಲಿಲ್ಲ. ಏನೋ ಕಾಟಾಚಾರಕ್ಕೆ ಹಸ್ತಲಾಘವ ಮಾಡಿದಂತಿತ್ತು, ಇದು ಕ್ರಿಕೆಟ್ ಗೆ ಮತ್ತು ಎದುರಾಳಿ ತಂಡದ ಆಟಗಾರನಿಗೆ ತೋರಿದ ಅಗೌರವ ಎಂದು ನನಗನ್ನಿಸುತ್ತದೆ ಎಂದು ಜಾನ್ಸನ್ ಹೇಳಿದ್ದಾರೆ.