ಸಿಕ್ಸರ್ ಗಳ ಬಾರಿಸಿ, ವಿಕೆಟ್ ಪಡೆಯಿರಿ: ಆಸಿಸ್ ತಂಡಕ್ಕೆ ಕ್ಯೂಟ್ ಕ್ಯಾಪ್ಟನ್ ನಿರ್ದೇಶನ!

7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್‌ ಟಿಮ್ ಪೈನೆ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಕಣಕ್ಕಿಳಿದಿದ್ದಾನೆ. ಅಲ್ಲದೆ ಸಿಕ್ಸರ್ ಗಳ ಸಿಡಿಸಿ, ಬೇಗ ಬೇಗನೇ ವಿಕೆಟ್ ಪಡೆಯಿರಿ ಎಂದು ತಂಡದ ಸಹ ಆಟಗಾರರಿಗೆ ನಿರ್ದೇಶನ ನೀಡಿದ್ದಾನೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ನಡೆಯುತ್ತಿರುವ ಬಾಕ್ಸಿಂಗ್ ಡೇ ಟೆಸ್ಟ್ (3ನೇ ಪಂದ್ಯ)ಕ್ಕೆ  ಆಸಿಸ್ ತಂಡಕ್ಕೆ ನೂತನ ಉಪನಾಯಕನ ಆಯ್ಕೆಯಾಗಿದ್ದು, 7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್‌ ಟಿಮ್ ಪೈನೆ ನೇತೃತ್ವದ ತಂಡಕ್ಕೆ ಉಪನಾಯಕನಾಗಿ ಕಣಕ್ಕಿಳಿದಿದ್ದಾನೆ. ಅಲ್ಲದೆ ಸಿಕ್ಸರ್ ಗಳ ಸಿಡಿಸಿ, ಬೇಗ ಬೇಗನೇ ವಿಕೆಟ್ ಪಡೆಯಿರಿ ಎಂದು ತಂಡದ ಸಹ ಆಟಗಾರರಿಗೆ ನಿರ್ದೇಶನ ನೀಡಿದ್ದಾನೆ.
ಹೌದು ಮೆಲ್ಬೋರ್ನ್ ಕ್ರಿಕೆಟ್ ಕ್ರೀಡಾಂಗಣ ಅಪರೂಪದಲ್ಲೇ ಅಪರೂಪದ ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು. ಹೃದಯ ಸಂಬಂಧ ಖಾಯಿಲೆಯಿಂದ ಬಳಲುತ್ತಿರುವ 7 ವರ್ಷದ ಪುಟ್ಟ ಪೋರ ಆರ್ಶೀ ಶಿಲ್ಲರ್‌ ಆಸಿಸ್ ತಂಡದ ಉಪನಾಯಕನಾಗಿ ಕಣಕ್ಕಿಳಿದಿದ್ದು ಮಾತ್ರವಲ್ಲದೇ ಟಾಸ್ ಪ್ರಕ್ರಿಯೆಯಲ್ಲೂ ಪಾಲ್ಗೊಳ್ಳುವ ಮೂಲಕ ಐತಿಹಾಸಿ ದಾಖಲೆ ಬರೆದ.
ಕ್ರಿಕೆಟ್‌ ಆಸ್ಪ್ರೇಲಿಯಾ, 15 ಸದಸ್ಯರ ಆಸ್ಪ್ರೇಲಿಯಾ ಬಳಗಕ್ಕೆ ಕ್ರಿಕೆಟ್‌ ವ್ಯಾಮೋಹಿ 7 ವರ್ಷದ ಬಾಲಕ ಆರ್ಶೀ ಶಿಲ್ಲರ್ ಸೇರ್ಪಡೆಯಾಗಿದ್ದು. ಈತ ಹೃದಯ ಸಂಬಂಧೀ ಕಾಯಿಲೆಯಿಂದ ಬಳಲುತ್ತಿದ್ದಾನೆ. ಕ್ರಿಕೆಟ್ ಮೇಲೆ ಅತಿಯಾದ ವ್ಯಾಮೋಹ ಬೆಳೆಸಿಕೊಂಡಿರುವ ಆರ್ಶಿ, ಭವಿಷ್ಯದಲ್ಲಿ ಆಸ್ಟ್ರೇಲಿಯಾ ತಂಡದ ನಾಯಕನಾಗಿ ಆಡಬೇಕು ಎಂದು ಬೃಹದಾಸೆಯನ್ನು ಹೊಂದಿದ್ದಾನೆ.
ಬಾಲಕನ ಆಸೆ ತಿಳಿದ ಕ್ರಿಕೆಟ್ ಆಸ್ಟ್ರೇಲಿಯಾ ಆತನನ್ನು ಕ್ರೀಡಾಂಗಣಕ್ಕೆ ಇಳಿಸಲು ನಿರ್ಧರಿಸಿತ್ತು. ಅದರಂತೆ ಇಂದು ಆರ್ಶಿ ನಸಹ ನಾಯಕನಾಗಿ ಕಣಕ್ಕಿಳಿದಿದ್ದು, ಟಾಸ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡ. ಆಸಿಸ್ ನಾಯಕ ಟಿಮ್ ಪೈನೆರೊಂದಿಗೆ ಟಾಸ್ ಪ್ರಕ್ರಿಯೆಲ್ಲಿ ಪಾಲ್ಗೊಂಡ ಆರ್ಶಿ ಸಿಕ್ಸರ್ ಸಿಡಿಸಿ ವಿಕೆಟ್ ಪಡೆಯಿರಿ ಎಂದು ನಿರ್ದೇಶನ ನೀಡಿದ್ದಾನೆ.
3 ತಿಂಗಳ ಮಗುವಾಗಿದ್ದಾಗಲೇ ಸಮಸ್ಯೆ ತಿಳಿದಿತ್ತು
ಇನ್ನು ಆರ್ಶಿ ಶಿಲ್ಲರ್ ಗೆ ಹೃದಯ ಸಂಬಂಧಿ ಸಮಸ್ಯೆ ಇರುವುದು ಆತನ ಪೋಷಕರಿಗೆ ಮೊದಲೇ ತಿಳಿದಿತ್ತು. ಆತನ ಚಿಕಿತ್ಸೆಗಾಗಿ ಅವರು ಹರಸಾಹಸ ಪಡುತ್ತಿದ್ದು, 3 ತಿಂಗಳ ಹಸುಗೂಸಿದ್ದಾಗಿನಿಂದಲೇ ಆರ್ಶಿ ಹೃದಯ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಈ ಬಗ್ಗೆ ಮಾತನಾಡಿರುವ ಆತನ ತಾಯಿ ಸರಾಹ್ ಅವರು, ಆತನ ಜೀವನದ ಪ್ರತೀಯೊಂದು ಕ್ಷಣಗಳನ್ನೂ ಸ್ಮರಣೀಯವಾಗಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಹೇಳುವ ಮೂಲಕ ತಮ್ಮ ಮಗನ ಬಗಿಗಿನ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com