ಅಷ್ಟೊಂದ್ ಅರ್ಜೆಂಟಾ..!; ವೈರಲ್ ಆಯ್ತು ರವಿ ಶಾಸ್ತ್ರಿ ಬಿಯರ್ ಬಾಟಲ್ ಪ್ರಹಸನದ ವಿಡಿಯೋ!

ಮೆಲ್ಬೋರ್ನ್ ನಲ್ಲಿ ಆಸ್ಚ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿದ ಬಳಿಕ ತಂಡದ ಕೋಚ್ ರವಿಶಾಸ್ತ್ರಿ ತೀವ್ರ ಟ್ರೋಲ್ ಗೆ ಒಳಗಾಗಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಮೆಲ್ಬೋರ್ನ್: ಮೆಲ್ಬೋರ್ನ್ ನಲ್ಲಿ ಆಸ್ಚ್ರೇಲಿಯಾ ವಿರುದ್ದದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಐತಿಹಾಸಿಕ ಜಯ ಸಾಧಿಸಿದ ಬಳಿಕ ತಂಡದ ಕೋಚ್ ರವಿಶಾಸ್ತ್ರಿ ತೀವ್ರ ಟ್ರೋಲ್ ಗೆ ಒಳಗಾಗಿದ್ದಾರೆ.
ಅರೆ ಟೀಂ ಇಂಡಿಯಾ ಗೆದ್ರೆ ಕೋಚ್ ರವಿಶಾಸ್ತ್ರಿಯನ್ನೇಕೆ ಟ್ರೋಲ್ ಮಾಡಲಾಗುತ್ತಿದೆ ಎಂದು ನೀವು ಪ್ರಶ್ನಿಸಿದರೆ ಅದಕ್ಕೆ ಉತ್ತರ.. ತಂಡದ ಗೆಲುವಿನ ಬಳಿಕ ಕೋಚ್ ರವಿಶಾಸ್ತ್ರಿ ಅವರ ಬಿಯರ್ ಬಾಟಲಿ ಪ್ರಹಸನದಿಂದಾಗಿ ಅವರು ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಗೆ ತುತ್ತಾಗಿದ್ದಾರೆ.
ಹೌದು ಅತ್ತ ಟೀಂ ಇಂಡಿಯಾ ಎಂಸಿಜಿಯಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಇತ್ತ ಕೋಚ್ ರವಿಶಾಸ್ತ್ರಿ ಬಿಯರ್ ಬಾಟಲಿಯನ್ನು ಕೈಗೆತ್ತಿಕೊಂಡು ಕುಡಿಯಲಾರಂಭಿಸಿದರು. ಪಂದ್ಯ ಮುಕ್ತಾಯದ ಬಳಿಕ ತಂಡದ ಡ್ರೆಸಿಂಗ್ ರೂಂನಲ್ಲಿ ಆರಂಭವಾದ ರವಿಶಾಸ್ತ್ರಿ ಅವರ ಬಿಯರ್ ಸೆಲೆಬ್ರೇಷನ್ಸ್ ಆ ಬಳಿಕ ತಂಡ ಹೊಟೆಲ್ ರೂಂ ಸೇರಿಕೊಳ್ಳುವವರೆಗೂ ಮುಂದುವರೆದಿತ್ತು. ಅಚ್ಚರಿ ಎಂದರೆ ರವಿಶಾಸ್ತ್ರಿ ತಂಡದ ಆಟಗಾರರು ಹೊಟೆಲ್ ನತ್ತ ಸಾಗಿದ್ದ ಬಸ್ ನಲ್ಲೂ ಬಿಯರ್ ದಾಸರಾಗಿದ್ದರು. 
ಹೊಟೆಲ್ ಬಳಿ ಬಸ್ ಬರುತ್ತಿದ್ದಂತೆಯೇ ಮೊದಲು ಕೆಳಗಿಳಿದ ರವಿಶಾಸ್ತ್ರಿ ಬಿಯರ್ ಬಾಟಲಿಯೊಂದಿಗೇ ಕೆಳಗಿಳಿದು ಬಿಯರ್ ಕುಡಿಯುತ್ತಾ ಕ್ಯಾಮೆರಾಗೆ ಪೋಸ್ ನೀಡುತ್ತಾ ಹೊಟೆಲ್ ನೊಳಗೆ ಸಾಗಿದರು. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ರವಿಶಾಸ್ತ್ರಿ ಬಿಯರ್ ಬಾಟಲಿ ಪ್ರಹಸನ ವೈರಲ್ ಆಗುತ್ತಿದೆ.
ಸಾಮಾಜಿಕ ಜಾಲತಾಣಗಳಲ್ಲಿ ಬಹುತೇಕರು ಶಾಸ್ತ್ರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ಹೊಟೆಲ್ ರೂಂಗೆ ಹೋಗುವಷ್ಟೂ ಸಾವಧಾನವಿರಲಿಲ್ಲವೇ ಎಂದು ಕಿಡಿಕಾರಿದ್ದಾರೆ. ಕೋಚ್ ರವಿಶಾಸ್ತ್ರಿ ಅವರ ವಿರುದ್ಧ ಕೇಳಿಬರುತ್ತಿರುವ ಟ್ರೋಲ್ ಗಳ ಪಟ್ಟಿ ಇಲ್ಲಿದೆ ನೋಡಿ...

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com