ಟಿ20: ಶ್ರೀಲಂಕಾದ ಸಂಗಕ್ಕಾರ ದಾಖಲೆ ಮುರಿದ ಮಹೇಂದ್ರ ಸಿಂಗ್ ಧೋನಿ!

ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಭಾಜನರಾಗಿರುವ ಮಾಜಿ ನಾಯಕ ಹಾಗೂ ಹಾಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಜೋಹಾನ್ಸ್‌ಬರ್ಗ್‌: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಶ್ರೇಷ್ಠ ವಿಕೆಟ್ ಕೀಪರ್ ಎಂಬ ಕೀರ್ತಿಗೆ ಭಾಜನರಾಗಿರುವ ಮಾಜಿ ನಾಯಕ ಹಾಗೂ ಹಾಲಿ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.
ಜೋಹಾನ್ಸ್‌ಬರ್ಗ್ ನಲ್ಲಿ  ಭಾನುವಾರ ನಡೆದ ದಕ್ಷಿಣ ಆಫ್ರಿಕಾ ವಿರುದ್ಧದ  ಮೊದಲ ಟಿ20 ಪಂದ್ಯದಲ್ಲಿ ಧೋನಿ ಅತೀ ಹೆಚ್ಚು ಕ್ಯಾಚ್ ಪಡೆದ ಆಟಗಾರರ ಪಟ್ಟಿಯಲ್ಲಿ ಧೋನಿ 3ನೇ ಆಟಗಾರ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ.  ಮೊದಲ ಟಿ20 ಪಂದ್ಯದಲ್ಲಿ ಧೋನಿ ಆಫ್ರಿಕಾದ ರೀಜಾ ಹೆನ್ರಿಕ್ಸ್‌ ಅವರ ಕ್ಯಾಚ್ ಪಡೆದಿದ್ದರು. ಇದು ಅಂತಾರಾಷ್ಟ್ರೀಯ ಟಿ20 ಪಂದ್ಯದಲ್ಲಿ ಧೋನಿ ಅವರ 134ನೇ ಕ್ಯಾಚ್ ಆಗಿತ್ತು. ಆ ಮೂಲಕ ಧೋನಿ ಸಂಗಕ್ಕಾರ ದಾಖಲೆಯನ್ನು  ಹಿಂದಿಕ್ಕಿದ್ದು. ಶ್ರೀಲಂಕಾದ ಸಂಗಕ್ಕಾರ 133 ಕ್ಯಾಚ್ ಪಡೆದಿದ್ದರು. 
ಅತಿ ಹೆಚ್ಚು ವಿಕೆಟ್ ಪಡೆದ ವಿಕೆಟ್‌ ಕೀಪರ್‌ಗಳಲ್ಲಿ ದೋನಿ ಮೂರನೇ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಮಾರ್ಕ್ ಬೌಷರ್ ಮತ್ತು ಆಸ್ಟ್ರೇಲಿಯಾದ ಆ್ಯಡಂ ಗಿಲ್‌ಕ್ರಿಸ್ಟ್ ಕ್ರಮವಾಗಿ ಮೊದಲ ಹಾಗೂ ಎರಡನೇ ಸ್ಥಾನದಲ್ಲಿದ್ದಾರೆ.  ಅಂತಾರಾಷ್ಟ್ರೀಯ, ಐಪಿಎಲ್, ಬಿಸಿಸಿಐ ಮತ್ತು ಐಸಿಸಿ ಮಾನ್ಯತೆ ಪಡೆದ ಟ್ವೆಂಟಿ–20 ಪಂದ್ಯಗಳು ಇದರಲ್ಲಿ ಸೇರಿವೆ. ದೋನಿ 87 ಅಂತರರಾಷ್ಟ್ರೀಯ ಟ್ವೆಂಟಿ–20 ಪಂದ್ಯಗಳನ್ನು ಆಡಿದ್ದು, 48 ಕ್ಯಾಚ್, 29 ಸ್ಟಂಪಿಂಗ್ ಮಾಡಿದ್ದಾರೆ.  ಐಪಿಎಲ್‌ನಲ್ಲಿ 159 ಪಂದ್ಯಗಳನ್ನು ಆಡಿ 76 ಕ್ಯಾಚ್ ಪಡೆದು 30 ಸ್ಟಂಪಿಂಗ್ ಮಾಡಿದ್ದಾರೆ.
ಟಿ20 ಮಾದರಿಯಲ್ಲಿ ಅತೀ ಹೆಚ್ಚು ಕ್ಯಾಚ್ ಪಡೆದ ವಿಕೆಟ್ ಕೀಪರ್
ಇನ್ನು ಎಂ.ಎಸ್‌. ಧೋನಿ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ ವಿಕೆಟ್‌ ಕೀಪರ್‌ ಆಗಿ ಹೆಚ್ಚು ಕ್ಯಾಚ್‌ ಪಡೆದ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದು, 275 ಪಂದ್ಯಗಳಲ್ಲಿ ಧೋನಿ 134 ಕ್ಯಾಚ್‌ ಪಡೆದಿದ್ದಾರೆ. ಕುಮಾರ ಸಂಗಕ್ಕರ  254 ಪಂದ್ಯಗಳಲ್ಲಿ 133 ಕ್ಯಾಚ್‌ ಪಡೆದಿದ್ದಾರೆ. ದಿನೇಶ್‌ ಕಾರ್ತಿಕ್‌ (227 ಪಂದ್ಯ 123 ಕ್ಯಾಚ್), ಕಮ್ರಾನ್ ಅಕ್ಮಲ್‌ (211 ಪಂದ್ಯ, 115 ಕ್ಯಾಚ್‌), ದಿನೇಶ್‌ ರಾಮ್ದಿನ್( 168 ಪಂದ್ಯ, 108 ಕ್ಯಾಚ್‌) ನಂತರದ ಸ್ಥಾನದಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com