'ಎ ಪ್ಲಸ್' ಅಗ್ರಶ್ರೇಣಿ ಒಪ್ಪಂದದಿಂದ ಎಂಎಸ್ ಧೋನಿಯನ್ನು ಕೈ ಬಿಡುತ್ತಾ ಬಿಸಿಸಿಐ?

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು 'ಎ' ಪ್ಲಸ್ ಗ್ರೇಡ್ ನಿಂದ ಕೈಬಿಟ್ಟಿದೆ...
ಎಂಎಸ್ ಧೋನಿ
ಎಂಎಸ್ ಧೋನಿ
Updated on: 
ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರನ್ನು 'ಎ' ಪ್ಲಸ್ ಗ್ರೇಡ್ ನಿಂದ ಕೈಬಿಟ್ಟಿದೆ ಎಂದು ಹೇಳಲಾಗುತ್ತಿದೆ.
2011ರ ವಿಶ್ವಕಪ್ ವಿಜೇತ ತಂಡದ ನೇತೃತ್ವ ವಹಿಸಿದ್ದ ಎಂಎಸ್ ಧೋನಿ ಕ್ರಿಕೆಟ್ ಮೂರು ಮಾದರಿ ಕ್ರಿಕೆಟ್ ಗೂ ರಾಜಿನಾಮೆ ನೀಡಿದ್ದರು. ಅವರನ್ನು ಬಿಸಿಸಿಐನ ಅಗ್ರಶ್ರೇಣಿ ಒಪ್ಪಂದದಲ್ಲಿರುವುದಕ್ಕೆ ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದು ಹೀಗಾಗಿ ನೂತನ ಕಾಂಟ್ರಾಕ್ಟ್ ಪಟ್ಟಿಯೊಂದನ್ನು ಬಿಸಿಸಿಐ ರಚಿಸಿದ್ದು ಆ ಪಟ್ಟಿಯಲ್ಲಿ ಧೋನಿ ಹೆಸರನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. 
ಭಾರತೀಯ ಕ್ರಿಕೆಟಿಗರ ಸಂಭಾವನೆ ಹೆಚ್ಚಿಸುವಂತೆ ತಂಡದ ನಾಯಕ ವಿರಾಟ್ ಕೊಹ್ಲಿ, ಧೋನಿ ಹಾಗೂ ಕೋಚ್ ರವಿಶಾಸ್ತ್ರಿ ಸೇರಿದಂತೆ ಹಲವರು ಒತ್ತಾಯಿಸಿದ್ದರು. ಇದಕ್ಕೆ ಬಿಸಿಸಿಐ ಆಡಳಿತ ಸಮಿತಿ ಕೆಲವೊಂದು ಬದಲಾವಣೆ ಮಾಡಿ ಸಂಭಾವನೆ ಪಟ್ಟಿಯೊಂದನ್ನು ರೆಡಿ ಮಾಡಿದ್ದು ಇದನ್ನು ಹಣಕಾಸು ಸಮಿತಿಗೆ ನೀಡಲಾಗುವುದು ಎಂದು ಬಿಸಿಸಿಐ ಆಡಳಿತ ಸಮಿತಿ ಹೇಳಿದೆ. 
ಬಿಸಿಸಿಐ ಆಟಗಾರರ ಸಂಭಾವನೆಯನ್ನು ನಾಲ್ಕು ಭಾಗಗಳಾಗಿ ವಿಂಗಡಿಸಿದೆ. ಎ ಪ್ಲಸ್, ಎ, ಬಿ, ಸಿ ಈ ಪಟ್ಟಿಯಲ್ಲಿ ಧೋನಿ ಅಗ್ರಶ್ರೇಣಿಯಲ್ಲಿದ್ದು ಇದೀಗ ಅವರನ್ನು ಕೈಬಿಡಲಾಗಿದೆ ಎಂದು ತಿಳಿದುಬಂದಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಟೆಸ್ಟ್, ಏಕದಿನ ಮತ್ತು ಟಿ20 ಆಟಗಾರರನ್ನು ಮಾತ್ರ ಎ ಪ್ಲಸ್ ಪಟ್ಟಿಯಲ್ಲಿ ಸೇರಿಸಲಾಗಿದೆ. ಹೀಗಾಗಿ ಟೆಸ್ಟ್ ಗೆ ವಿದಾಯ ಹೇಳಿದ ಧೋನಿ ಎ ಪ್ಲಸ್ ಶ್ರೇಣಿಯಿಂದ ಹೊರಬೀಳುವ ಸಾಧ್ಯತೆ ಹೆಚ್ಚಾಗಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com